ದೇಶ

'ಶಾಸಕಾಂಗವನ್ನು ನಿಷ್ಕ್ರಿಯಗೊಳಿಸುವುದರ ಬಗ್ಗೆ ಸಂಬಂಧಪಟ್ಟವರೆಲ್ಲರೂ ಚಿಂತಿಸಬೇಕಾಗಿದೆ': ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು

Sumana Upadhyaya

ನವದೆಹಲಿ: 72 ವರ್ಷಗಳ ಹಿಂದೆ, ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಮ್ಮ ಸಂವಿಧಾನದ ರಚನೆಕಾರರು ಸ್ವತಂತ್ರ ಭಾರತದ ಭವ್ಯ ಭವಿಷ್ಯಕ್ಕೆ ಈ ದಾಖಲೆಯನ್ನು ಅಳವಡಿಸಿಕೊಂಡರು. ಸಂವಿಧಾನದ ಬಲಕ್ಕೆ ತಕ್ಕಂತೆ ಭಾರತದ ಅಭಿವೃದ್ಧಿಯ ಪಯಣ ಮುಂದುವರಿಯುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇಂದು ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಿರುವುದು ಮಾತ್ರವಲ್ಲದೆ ಸಂವಿಧಾನ ಸಭೆಗಳ ಸದಸ್ಯರಾಗುವ ಅವಕಾಶವನ್ನು ಕೂಡ ನೀಡಲಾಗಿದೆ. ಸಂವಿಧಾನ ರಚನೆಯಲ್ಲಿ ಮಹಿಳೆಯರದ್ದು ಕೂಡ ಅಭೂತಪೂರ್ವ ಕೊಡುಗೆಯಿದೆ ಎಂದರು. 

ಎಂ.ವೆಂಕಯ್ಯ ನಾಯ್ಡು: ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮಾತನಾಡಿ, ಸಂವಿಧಾನ ಪೀಠಿಕೆಯು ಸಂವಿಧಾನದ ತತ್ವಶಾಸ್ತ್ರವನ್ನು ಸಾರಾಂಶಗೊಳಿಸುತ್ತದೆ, ಸಂವಿಧಾನದಲ್ಲಿ ಪ್ರಜಾಪ್ರಭುತ್ವ ಗಣರಾಜ್ಯಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲಾ ಜನರನ್ನೊಳಗೊಂಡ ಅಭಿವೃದ್ಧಿಯೇ ಸಂವಿಧಾನದ ಆಶಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಸತ್ತಿನ ಮೇಲ್ಮನೆಯಲ್ಲಿ ಉತ್ತಮ ಚರ್ಚೆಯಾಗುತ್ತಿಲ್ಲ ಎಂಬ ಬಗ್ಗೆ ಸಹ ಕಳವಳ ವ್ಯಕ್ತಪಡಿಸಿದರು. ಮೇಲ್ಮನೆಯನ್ನು ಸಾಮಾನ್ಯವಾಗಿ ಬುದ್ಧಿವಂತರ, ಅನುಭವಿಗಳ, ಹೆಚ್ಚು ಸಂಭಾವಿತ ಸದಸ್ಯರ ಮನೆ ಎಂದು ಹೇಳಲಾಗುತ್ತದೆ. ರಾಜ್ಯಸಭೆಯ 254 ನೇ ಅಧಿವೇಶನದಲ್ಲಿ, ಕಲಾಪದ ಕಾರ್ಯಕ್ಷಮತೆ ಶೇಕಡಾ 29.60 ಕ್ಕೆ ಇಳಿದಿದೆ. ಇದರರ್ಥ ರಾಜ್ಯಸಭೆಯು ಸುಮಾರು ಶೇಕಡಾ 70ರಷ್ಟು ಕ್ರಿಯಾತ್ಮಕ, ಗಂಭೀರ ಚರ್ಚೆಯ ಸಮಯವನ್ನು ನಿಷ್ಪ್ರಯೋಜಕವಾಗಿ ಕಳೆದಿದೆ. ಶಾಸಕಾಂಗವನ್ನು ನಿಷ್ಕ್ರಿಯಗೊಳಿಸುವುದರ ಬಗ್ಗೆ ಸಂಬಂಧಪಟ್ಟವರೆಲ್ಲರೂ ಚಿಂತಿಸಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

SCROLL FOR NEXT