ದೇಶ

ರೈತರ ಹೋರಾಟಕ್ಕೆ ವರ್ಷ: ಪ್ರತಿಭಟನೆಯು ಬಿಜೆಪಿ ಸರ್ಕಾರದ ದುರಹಂಕಾರವನ್ನು ನೆನಪಿಸಲಿದೆ- ಪ್ರಿಯಾಕಾ ವಾದ್ರಾ

Manjula VN

ನವದೆಹಲಿ: ರೈತರ ಸತ್ಯಾಗ್ರಹವು ಒಂದು ವರ್ಷ ಪೂರ್ಣಗೊಳಿಸಿದ್ದು, ಈ ಪ್ರತಿಭಟನೆಯು ಬಿಜೆಪಿ ಸರ್ಕಾರದ ದುರಹಂಕಾರ ಮತ್ತು ಹುತಾತ್ಮರಾದ 700 ರೈತರ ತ್ಯಾಗವನ್ನು ನೆನಪಿಸಲಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೈತರು ಕಳೆದ ವರ್ಷದ 26ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಪ್ರತಿಭಟನೆಗೆ ಇಂದಿಗೆ ಒಂದು ವರ್ಷಗಳು ಕಳೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

 ಒಂದು ವರ್ಷದ ರೈತರ ಸತ್ಯಾಗ್ರಹವು ರೈತರ ದೃಢ ನಿಲುವು ಮತ್ತು ಅನ್ನದಾತರ ಮೇಲೆ ಸರ್ಕಾರ ನಡೆಸಿದ ದೌರ್ಜನ್ಯವನ್ನು ನೆನಪಿಸುತ್ತದೆ. ಆದರೆ ಭಾರತದಲ್ಲಿ ರೈತರನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ರೈತರ ಹೋರಾಟಕ್ಕೆ ಸಿಕ್ಕ ಗೆಲುವೇ ಇದಕ್ಕೆ ನಿದರ್ಶನ ಎಂದು ಹೇಳಿದ್ದಾರೆ. ಅಲ್ಲದೆ, ‘ಜೈ ಕಿಸಾನ್‌’ ಎಂದು ಘೋಷಣೆಯನ್ನೂ ಸೇರಿಸಿದ್ದಾರೆ.

SCROLL FOR NEXT