ದೇಶ

ಆರ್ ಟಿಪಿಸಿಆರ್ ಪರೀಕ್ಷಾ ವರದಿ ಇಲ್ಲದೆಯೆ ಮಕ್ಕಳು ಶಬರಿಮಲೆ ದೇವಾಲಯಕ್ಕೆ ಹೋಗಬಹುದು

Nagaraja AB

ತಿರುವನಂತಪುರ: ಆರ್ ಟಿ ಪಿಸಿಆರ್ ಪರೀಕ್ಷಾ ವರದಿ ಇಲ್ಲದೆ ಮಕ್ಕಳು ಶಬರಿಮಲೆ ದೇವಾಲಯಕ್ಕೆ ಹೋಗಲು ಕೇರಳ ಸರ್ಕಾರ ಶನಿವಾರ ಅವಕಾಶ ಮಾಡಿಕೊಟ್ಟಿದೆ.

ಆದಾಗ್ಯೂ, ಯುವಕರು ದೇವಾಲಯ ಪ್ರವೇಶಕ್ಕೆ 72 ಗಂಟೆಗಳ ಮುಂಚಿನ ಆರ್ ಟಿ ಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಅಥವಾ ಸಂಪೂರ್ಣ ಲಸಿಕೆ ಪ್ರಮಾಣದ ಅಗ್ಯವಿರುವುದಾಗಿ ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ. 

ಮಕ್ಕಳ ಜೊತೆಯಲ್ಲಿರುವ ಪೋಷಕರು ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸರ್ಸ್ ಒಳಗೊಂಡಂತೆ ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಬೇಕು, ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಅವರು ಹೊಣೆಯಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

SCROLL FOR NEXT