ದೇಶ

'ಭಾರತ' ಭಾರತವಾಗಿಯೇ ಉಳಿಯಲು ಹಿಂದೂಗಳು ಹಿಂದೂಗಳಾಗಿಯೇ ಉಳಿಯಬೇಕು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Harshavardhan M

ಭೋಪಾಲ್:"ಭಾರತ" ಭಾರತ ದೇಶವಾಗಿಯೇ ಉಳಿಯಬೇಕಾದರೆ ಹಿಂದೂಗಳು ಹಿಂದೂಗಳಾಗಿಯೇ ಉಳಿಯಬೇಕು ಎಂದು ಆರ್‌ಎಸ್‌ಎಸ್‌ ಪ್ರಮುಖ್ ಭಾಗವತ್ ಕರೆ ನೀಡಿದ್ದಾರೆ. ಗ್ವಾಲಿಯರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳೂ ಇಲ್ಲ. ಹಿಂದೂ ಮತ್ತು ಭಾರತವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ಭಾರತ ಭಾರತವಾಗಿ ಉಳಿಯಬೇಕಾದರೆ ಭಾರತ ಹಿಂದೂವಾಗಿಯೇ ಉಳಿಯಬೇಕು. ಹಿಂದೂ ಹಿಂದೂವಾಗಿಯೇ ಉಳಿಯಬೇಕಾದರೆ ಭಾರತ ಒಂದಾಗಬೇಕು. ಅಖಂಡ ಭಾರತ ಒಡೆದಿದೆ. ನಾವು ಹಿಂದೂಗಳು ಎಂಬ ಭಾವನೆಯನ್ನು ಮರೆತಿದ್ದರಿಂದ ಪಾಕಿಸ್ತಾನ ಹುಟ್ಟಿದೆ. ಅಲ್ಲಿಯ ಮುಸ್ಲಿಮರು ಸಹ ಇದನ್ನು ಮರೆತಿದ್ದಾರೆ. ಹಿಂದೂ ಎಂದುಕೊಳ್ಳುವವರ ಶಕ್ತಿ ಕಡಿಮೆಯಾದ್ದರಿಂದಲೇ ಪಾಕಿಸ್ತಾನವು ಭಾರತವಾಗಿರಲೂ ಸಾಧ್ಯವಾಗಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಇದಕ್ಕೂ ಮುನ್ನ ನೋಯ್ಡಾದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ವಿಭಜನೆ ಎಂಬುದು ರಾಜಕೀಯ ಪ್ರಶ್ನೆಯಲ್ಲ, ಅದು ಅಸ್ತಿತ್ವದ ಪ್ರಶ್ನೆ. ಭಾರತದ ವಿಭಜನೆಯ ಪ್ರಸ್ತಾಪವನ್ನು ರಕ್ತದ ನದಿಗಳು ಹರಿಯದಂತೆ ತಡೆಯಲು ಮಾತ್ರ ಅಂಗೀಕರಿಸಲಾಗಿತ್ತಾದರೂ ಇದಕ್ಕೆ ವಿರುದ್ಧವಾಗಿ, ಉದ್ದೇಶವನ್ನೇ ಮರೆತು ಅಂದಿನಿಂದ ಹೆಚ್ಚು ರಕ್ತವನ್ನು ಹರಿಸಲಾಗುತ್ತಿದೆ. ಅಂದಿನ ಪರಿಸ್ಥಿತಿಯಿಂದಾಗಿ ಇಸ್ಲಾಂ ಮತ್ತು ಬ್ರಿಟಿಷರ ದಾಳಿಯ ಪರಿಣಾಮವೇ ಭಾರತ ವಿಭಜನೆಯಾಗಿದೆ ಭಾಗವತ್ ಅಭಿಪ್ರಾಯಪಟ್ಟರು.

SCROLL FOR NEXT