ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ಆರ್ ಹರಿಕುಮಾರ್ ಅಧಿಕಾರ ಸ್ವೀಕಾರ 

ಅಡ್ಮಿರಲ್ ಆರ್ ಹರಿಕುಮಾರ್ ನ.30 ರಂದು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆಡ್ಮಿರಲ್ ಆರ್ ಹರಿಕುಮಾರ್
Srinivas Rao BV
Updated On : 30 Nov 2021, 11:20 am

ನವದೆಹಲಿ: ಅಡ್ಮಿರಲ್ ಆರ್ ಹರಿಕುಮಾರ್ ನ.30 ರಂದು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 

ನೌಕಾಪಡೆಯ ಹಾಲಿ ಮುಖ್ಯಸ್ಥ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.30 ರಂದು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯಸ್ಥರು ಅಧಿಕಾರ ವಹಿಸಿಕೊಂಡಿದ್ದಾರೆ. 

1962 ರ ಏಪ್ರಿಲ್ 12 ರಂದು ಜನಿಸಿದ ಉಪ ಅಡ್ಮಿರಲ್ ಕುಮಾರ್ ಅವರು 1983 ರ ಜ.1 ರಂದು ಸೇವೆಗೆ ಸೇರ್ಪಡೆಯಾಗಿದ್ದರು.  ಐಎನ್ ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್ಎಸ್ ಕೋರಾ, ಗುರಿ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ರಣವೀರ್ ಗಳಲ್ಲಿ ಕಾರ್ಯನಿರ್ವಹಿಸಿರುವ ಕುಮಾರ್ ಅವರು ಅಪಾರ ಅನುಭವ ಹಾಗೂ ಹಿಡಿತವನ್ನು ಹೊಂದಿದ್ದಾರೆ.

Advertisement

Advertisement

ನೌಕಾಪಡೆಯ ಅಡ್ಮಿರಲ್ ಆಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ  ಉಪಅಡ್ಮಿರಲ್  ಆಗಿದ್ದ ಆರ್ ಹರಿಕುಮಾರ್ ವೆಸ್ಟ್ರನ್ ನೌಕಾ ಕಮಾಂಡ್ ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement