ದೇಶ

ಕೇರಳ: ಅಕ್ಟೋಬರ್ 25 ರಿಂದ ಚಿತ್ರಮಂದಿರಗಳು ಓಪನ್, ಶೇ. 50ರಷ್ಟು ಆಸನ ಭರ್ತಿಗೆ ಅವಕಾಶ

Lingaraj Badiger

ತಿರುವನಂತಪುರಂ: ಕೇರಳದಲ್ಲಿ ಕೋವಿಡ್-19 ನಿರ್ಬಂಧಗಳನ್ನು ಮತ್ತಷ್ಟು ಸಡಿಸಲಾಗಿದ್ದು, ಅಕ್ಟೋಬರ್ 25 ರಿಂದ ಚಿತ್ರಮಂದಿರಗಳು ಮತ್ತು ಒಳಾಂಗಣ ಕ್ರೀಡಾಂಗಣಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯ ನಂತರ ಕೇರಳ ಸರ್ಕಾರ ಮತ್ತಷ್ಟು ಸಡಿಲಿಕೆಗಳನ್ನು ಘೋಷಿಸಿತು.

ಚಿತ್ರಮಂದಿರಗಳ ಸಿಬ್ಬಂದಿ ಮತ್ತು ವೀಕ್ಷಕರು ಕೋವಿಡ್ ಲಸಿಕೆಯ ಎರಡೂ ಡೋಸ್‌ ಪಡೆದಿರುವುದು ಕಡ್ಡಾಯ. ಶೇ. 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ಓಪನ್ ಮಾಡಲು ಅನುಮತಿ ನೀಡಲಾಗಿದೆ.

ಅಕ್ಟೋಬರ್ 18 ರಿಂದ ಕಾಲೇಜುಗಳು ಎಲ್ಲಾ ತರಗತಿಗಳನ್ನು ನಡೆಸಬಹುದು. ಶಿಕ್ಷಕರು, ಇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಎರಡೂ ಡೋಸ್‌ ಕೋವಿಡ್ ಲಸಿಕೆ ಪಡೆದಿರಬೇಕು. ತರಬೇತಿ ಕೇಂದ್ರಗಳು ದಿನದ ತರಗತಿಗಳನ್ನು ಆರಂಭಿಸಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ.

SCROLL FOR NEXT