ದೇಶ

ದೇಶದಲ್ಲಿ 90 ಕೋಟಿಗೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ: ಕೇಂದ್ರ ಆರೋಗ್ಯ ಸಚಿವ

Lingaraj Badiger

ನವದೆಹಲಿ: ದೇಶದಲ್ಲಿ ಇದುವರೆಗೆ 90 ಕೋಟಿಗೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಶನಿವಾರ ತಿಳಿಸಿದ್ದಾರೆ.

"ಶಾಸ್ತ್ರಿ ಜೀ 'ಜೈ ಜವಾನ್ - ಜೈ ಕಿಸಾನ್' ಘೋಷಣೆಯನ್ನು ನೀಡಿದರು. ಪೂಜ್ಯ ಅಟಲ್ ಜೀ ಅವರು 'ಜೈ ವಿಜ್ಞಾನ' ಮತ್ತು ಪ್ರಧಾನಿ ನರೇಂದ್ರ ಮೋದಿ ಜೀ ಅವರು 'ಜೈ ಅನುಸಂಧಾನ್' ಘೋಷಣೆಯನ್ನು ನೀಡಿದರು. ಈ ಕರೋನಾ ಲಸಿಕೆ ಅನುಸಂಧಾನದ ಫಲಿತಾಂಶ. ಜೈ ಅನುಸಂಧನ್" ಎಂದು ಮಾಂಡವಿಯಾ ಅವರು ಟ್ವೀಟ್ ಮಾಡಿದ್ದಾರೆ.

ಜನವರಿ 16 ರಂದು ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿ(ಎಚ್‌ಸಿಡಬ್ಲ್ಯೂ)ಗೆ ಲಸಿಕೆ ಹಾಕಲಾಯಿತು. ನಂತರ ಫೆಬ್ರವರಿ 2ರಿಂದ 

ಮುಂಚೂಣಿ ಕೆಲಸಗಾರರಿಗೆ(FLWs), ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆ ನೀಡಲಾಯಿತು.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ಲಯಸಿಕೆ ಅಭಿಯಾನವನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿತು.

SCROLL FOR NEXT