ದೇಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2056 ಹುದ್ದೆಗಳು ಖಾಲಿ: ಆಸಕ್ತರು ಅರ್ಜಿ ಸಲ್ಲಿಸಿ

Srinivasamurthy VN

ಬೆಂಗಳೂರು: ದೇಶದ ಅತೀ ದೊಡ್ಡ ಬ್ಯಾಕಿಂಗ್ ಸಂಸ್ಥೆ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಸುಮಾರು 2056 ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ. 
 
ಒಟ್ಟು ಹುದ್ದೆಗಳ ಸಂಖ್ಯೆ: 2056 

ಹುದ್ದೆಗಳ ಹೆಸರು: ಪ್ರೊಬೆಷನರಿ ಆಫೀಸರ್ಸ್    

ಕೆಲಸದ ಸ್ಥಳ: ಎಸ್ ಬಿಐ ಬ್ಯಾಂಕ್ ಶಾಖೆಗಳಲ್ಲಿ

ಶೈಕ್ಷಣಿಕ ಅರ್ಹತೆ: 
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ.

ಪದವಿ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು, ಒಂದು ವೇಳೆ ಸಂದರ್ಶನಕ್ಕೆ ಕರೆದರೆ, ಅವರು 31 ನೇ ಡಿಸೆಂಬರ್ 2021 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.

ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (ಐಡಿಡಿ) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಐಡಿಡಿ ಉತ್ತೀರ್ಣರಾದ ದಿನಾಂಕ 31 ಡಿಸೆಂಬರ್ 2021 ಅಥವಾ ಅದಕ್ಕಿಂತ ಮುಂಚೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್

ಅರ್ಜಿ ಸಲ್ಲಿಕೆ ದಿನಾಂಕ: ಅಕ್ಟೋಬರ್ 5 ರಿಂದ ಅಕ್ಟೋಬರ್ 25ರವರೆಗೆ

ಪರೀಕ್ಷಾ ಪ್ರಕ್ರಿಯೆ
ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ - ನವೆಂಬರ್/ ಡಿಸೆಂಬರ್ 2021 
ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ - ಡಿಸೆಂಬರ್ 2021
ಮೂರನೇ ಹಂತ: ಸಂದರ್ಶನ (ಅಥವಾ ಸಂದರ್ಶನ ಮತ್ತು ಗುಂಪು ವ್ಯಾಯಾಮಗಳು) ಫೆಬ್ರವರಿ 2022 ರ 2ನೇ ಅಥವಾ 3ನೇ ವಾರ

ವಯೋಮಿತಿ: 
01.04.2021 ರಂತೆ, 21 ವರ್ಷಕ್ಕಿಂತ ಕಡಿಮೆ ಇರಬಾರದು. 1.04.2021 ರಂತೆ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 1.04.2000 ಕ್ಕಿಂತ ಮುಂಚಿತವಾಗಿ ಜನಿಸಿಲ್ಲ ಮತ್ತು 2.04.1991ರ ನಂತರ ಜನಿಸಿರಬಾರದು. 
ಗರಿಷ್ಠ ವಯಸ್ಸಿನ ಮಿತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ 5 ವರ್ಷ, ಇತರೆ ಹಿಂದುಳಿದ ವರ್ಗಗಳಿಗೆ 3 ವರ್ಷ

ಶುಲ್ಕಪಾವತಿ
ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಆನ್ ಲೈನ್ ನೋಂದಣಿ ಕಡ್ಡಾಯ
ನೋಂದಣಿ ಮಾಡಬೇಕಾದ ಲಿಂಕ್: 
https://bank.sbi/careers
https://www.sbi.co.in/careers
 

SCROLL FOR NEXT