ಪ್ರಿಯಾಂಕಾ ಗಾಂಧಿ 
ದೇಶ

ಲಖಿಂಪುರ್ ಖೇರಿ ಹಿಂಸಾಚಾರ: ದೆಹಲಿ ಸರ್ಕಾರಿ ಕಾರ್ಯಕ್ರಮಕ್ಕೆ ಅಜಯ್ ಮಿಶ್ರಾ ಹಾಜರು; ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ಪಟ್ಟು

ಲಖಿಂಪುರ್ ಖೇರಿ ಘಟನೆ ಸಂಬಂಧ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ, ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. 

ಲಖನೌ: ಲಖಿಂಪುರ್ ಖೇರಿ ಘಟನೆ ಸಂಬಂಧ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ, ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕಾ ಗಾಂಧಿಯವರು, ಪ್ರಜಾಪ್ರಭುತ್ವದಲ್ಲಿ ನ್ಯಾಯ ಪಡೆದುಕೊಳ್ಳುವುದು ನಮ್ಮ ಹಕ್ಕಾಗಿದೆ. ಆದರೆ, ಘಟನೆ ಸಂಬಂಧ ಇನ್ನೂ ನ್ಯಾಯ ದೊರೆತಿಲ್ಲ. ಪ್ರತಿಯೊಬ್ಬ ಪ್ರತ್ಯಕ್ಷದರ್ಶಿ ಕೂಡ ಅಜಯ್ ಮಿಶ್ರಾ ಅವರ ಮಗನನ್ನು ನೋಡಿದ್ದಾರೆ, ಗುರ್ತಿಸಿದ್ದಾರೆ, ಅವರ ಪಾತ್ರವಿದೆ ಎಂದು ಹೇಳುತ್ತಿದ್ದಾರೆ. ಪಕ್ಷಪಾತವಿಲ್ಲದ ತನಿಖೆಗಾಗಿ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ. 

ನಾನು ನಿನ್ನೆ ಭೇಟಿಯಾದ ಎಲ್ಲಾ ಸಂತ್ರಸ್ತರ ಕುಟುಂಬಗಳೂ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ತಡೆಯಲು ಸರ್ಕಾರ ಪೊಲೀಸರನ್ನು ಬಳಕೆ ಮಾಡಿಕೊಂಡಿದೆ. ಆದರೆ, ಆರೋಪಿಗಳನ್ನು ಬಂಧಿಸಲು ಬಳಸಿಲ್ಲ ಎಂದು ಕಿಡಿಕಾರಿದ್ದಾರೆ. 

ಉತ್ತರ ಪ್ರದೇ​ಶದ ಲಖೀಂಪುರ ಖೇರಿ​ಯಲ್ಲಿ ಇತ್ತೀ​ಚೆಗೆ ರೈತರ ಮೇಲೆ ನಡೆದ ಹಿಂಸಾ​ಚಾರ ಪ್ರಕ​ರ​ಣದ ಸಂತ್ರಸ್ತ ಕುಟುಂಬ​ಗ​ಳನ್ನು ನಿನ್ನೆ ರಾತ್ರಿ ಕಾಂಗ್ರೆಸ್‌ ನಾಯ​ಕ​ರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ​ಯಾಗಿ ಸಂತೈ​ಸಿ​ದರು.

ಪಾಲಿಯಾ ಗ್ರಾಮದ ಲವ್‌​ಪ್ರೀತ್‌ ಸಿಂಗ್‌ ಎಂಬ ಮೃತ ರೈತನ ಮನೆಗೆ ಆಗ​ಮಿ​ಸಿದ ಉಭಯ ನಾಯ​ಕರು ಸಂತಾಪ ಸೂಚಿ​ಸಿ​ದರು ಹಾಗೂ ಉಭಯ ನಾಯ​ಕರು ಕುಟುಂಬ​ಸ್ಥ​ರನ್ನು ಬಿಗಿ​ದಪ್ಪಿ ಸಾಂತ್ವನ ಹೇಳಿ​ದ​ರು ಹಾಗೂ ಕುಟುಂಬಕ್ಕೆ ನ್ಯಾಯ ದೊರ​ಕಿ​ಸಿ​ಕೊ​ಡುವ ಭರ​ವಸೆ ನೀಡಿ​ದ​ರು.

ಈ ವೇಳೆ ಛತ್ತೀ​ಸ್‌​ಗಢ ಮುಖ್ಯ​ಮಂತ್ರಿ ಭೂಪೇಶ್‌ ಬಾಘೇಲ್‌, ಪಂಜಾಬ್‌ ಮುಖ್ಯ​ಮಂತ್ರಿ ಚರ​ಣ್‌​ಜಿತ್‌ ಸಿಂಗ್‌ ಚನ್ನಿ, ಕಾಂಗ್ರೆಸ್‌ ನೇತಾರ ದೀಪೇಂದರ್‌ ಹೂಡಾ ಹಾಜ​ರಿ​ದ್ದ​ರು.

ನಿನ್ನೆ ಬೆಳ​ಗ್ಗೆಯೇ ರಾಹುಲ್‌ ಗಾಂಧಿ ಅವ​ರು ಪಂಜಾಬ್‌ ಮುಖ್ಯ​ಮಂತ್ರಿ ಚರ​ಣ್‌​ಜಿತ್‌ ಸಿಂಗ್‌ ಚನ್ನಿ ಹಾಗೂ ಉತ್ತ​ರಾ​ಖಂಡ ಮುಖ್ಯ​ಮಂತ್ರಿ ಭೂಪೇಶ್‌ ಬಾಘೇಲ್‌ ಅವರ ಜತೆ ಲಖ​ನೌಗೆ ಆಗ​ಮಿ​ಸಿ​ದರು. ಮೊದಲು ಇವರ ಭೇಟಿ​ಗೆ ಉತ್ತರ ಪ್ರದೇಶ ಸರ್ಕಾರ ಅನು​ಮತಿ ನಿರಾ​ಕ​ರಿ​ಸಿ​ತ್ತಾ​ದರೂ ನಂತರ ಒತ್ತ​ಡಕ್ಕೆ ಮಣಿದು ಅನು​ಮತಿ ನೀಡಿತು. ಆದರೆ ಲಖನೌ ಏರ್‌​ಪೋ​ರ್ಟ್‌​ನಲ್ಲಿ ಸರ್ಕಾರ ವಿಧಿ​ಸಿದ ಷರತ್ತು ವಿವಾ​ದಕ್ಕೆ ಕಾರ​ಣ​ವಾ​ಯಿ​ತು.

ವಿಮಾ​ನ ನಿಲ್ದಾ​ಣ​ದ​ಲ್ಲಿದ್ದ ಪೊಲೀ​ಸರು ರಾಹುಲ್‌ ಅವ​ರಿಗೆ ‘ಪೊ​ಲೀಸ್‌ ವಾಹ​ನ​ದಲ್ಲಿ ಲಖೀಂಪು​ರಕ್ಕೆ ಭೇಟಿ ಕೊಡ​ಬೇಕು. ಖಾಸಗಿ ವಾಹನ ಬಳ​ಸ​ಬೇ​ಡಿ’ ಎಂದ​ರು. ಇದರಿಂದ ಕೋಪಗೊಂಡ ರಾಹು​ಲ್‌, ‘ನನ್ನ ಪ್ರಯಾಣವನ್ನು ನಿರ್ಧರಿಸಲು ನೀವು ಯಾರು? ನಾನು ನನ್ನ ಕಾರಿನಲ್ಲಿಯೇ ಹೋಗಲು ಬಯಸುತ್ತೇನೆ’ ಎಂದು ಹೇಳಿ ಧರಣಿ ಕುಳಿ​ತ​ರು. 

‘ಸ್ವಂತ ಕಾರಿನಲ್ಲಿ ಹೋಗಲು 20 ದಿನ​ವಾ​ದರೂ ಸರಿ, ಎಷ್ಟು ದಿನವಾದರೂ ಸರಿ.. ವಿಮಾನ ನಿಲ್ದಾಣದಲ್ಲಿಯೇ ಕಾಯುವೆ’ ಎಂದು ಸವಾಲು ಹಾಕಿ​ದರು. ಕೊನೆಗೆ ಸ್ವಂತ ವಾಹ​ನ​ದಲ್ಲಿ ಲಖೀಂಪು​ರಕ್ಕೆ ಭೇಟಿ ನೀಡಲು ರಾಹು​ಲ್‌ಗೆ ಪೊಲೀ​ಸರು ಅನು​ಮ​ತಿ​ಸಿ​ದ​ರು.

ಈ ನಡುವೆ, ಸೀತಾ​ಪು​ರ​ದಲ್ಲಿ ಬಂಧ​ನ​ದ​ಲ್ಲಿದ್ದ ರಾಹುಲ್‌ ಗಾಂಧಿ ಸೋದರಿ ಪ್ರಿಯಾಂಕಾ ಅವ​ರನ್ನು ಪೊಲೀ​ಸರು ಬಂಧ​ಮು​ಕ್ತ​ಗೊ​ಳಿ​ಸಲಾಗಿತ್ತು. ಮಾರ್ಗ​ಮಧ್ಯೆ ರಾಹುಲ್‌ ಅವರು ಪ್ರಿಯಾಂಕಾ ಅವ​ರನ್ನೂ ತಮ್ಮ ಜತೆಗೆ ಲಖೀಂಪು​ರಕ್ಕೆ ಕರೆದೊ​ಯ್ದ​ರು. ​ಬ​ಳಿಕ ಪ್ರಿಯಾಂಕಾ ಹಾಗೂ ರಾಹುಲ್‌ ಅವರು ರಾತ್ರಿ ವೇಳೆ ಕೆಲವು ಸಂತ್ರಸ್ತ ಕುಟುಂಬ​ಗ​ಳನ್ನು ಭೇಟಿ ಮಾಡಿ​ದ​ರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT