ದೇಶ

ಜಮ್ಮು-ಕಾಶ್ಮೀರದ ಜನತೆಯನ್ನು ಕಾಪಾಡುವಲ್ಲಿ ಕೇಂದ್ರ ವಿಫಲ: ಕಾಂಗ್ರೆಸ್ ನಾಯಕಿ ರಜನಿ ಪಾಟೀಲ್ 

Srinivas Rao BV

ಶ್ರೀನಗರ: ಜಮ್ಮು-ಕಾಶ್ಮೀರದ ಜನತೆಯನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕಿ ರಜನಿ ಪಾಟೀಲ್ ಆರೋಪಿಸಿದ್ದಾರೆ. 

ಜಮ್ಮು-ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಗೀಡಾದ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ರಾಜ್ಯಸಭೆ ಸದಸ್ಯರಾಗಿರುವ ರಜನಿ ಪಾಟೀಲ್, ಕೇಂದ್ರಾಡಳಿತ ಪ್ರದೇಶದಲ್ಲಿ ಹತ್ಯೆಯಾಗಿರುವುದು ಕೇಂದ್ರ ಸರ್ಕಾರದ ವೈಫಲ್ಯ, ಜಮ್ಮು-ಕಾಶ್ಮೀರದ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. 

ಮೊಹಮ್ಮದ್ ಶಫಿರ್ ದರ್ ಅವರನ್ನು ಬಂಡಿಪೋರಾದಲ್ಲಿ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರೆ, ಎಂಎಲ್ ಬಿಂದ್ರೂ ಹಾಗೂ ಸುಪಿಂದರ್ ಕೌರ್ ಅವರನ್ನು ಮತ್ತೊಂದು ಘಟನೆಯಲ್ಲಿ ಉಗ್ರರು ಹತ್ಯೆ ಮಾಡಿದ್ದರು.

ಎರಡೂ ಕುಟುಂಬಗಳ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಉಗ್ರವಾದಿಗಳಿಂದ ಹತ್ಯೆಗೀಡಾಗಿದ್ದ ಶಿಕ್ಷಕರಾದ ದೀಪಕ್ ಚಂದ್ ಅವರ ನಿವಾಸಕ್ಕೂ ಕಾಂಗ್ರೆಸ್ ನಾಯಕರು ಭೇಟಿ ನೀಡಲಿದ್ದಾರೆ. "ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಇತರರಿಗೆ ಭದ್ರತೆಯ ವಾತಾವರನ ಮೂಡಲು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮನವಿ ಮಾಡಿದೆ. 

SCROLL FOR NEXT