ಆಶಿಶ್ ಮಿಶ್ರಾ 
ದೇಶ

ಲಖಿಂಪುರ್ ಹಿಂಸಾಚಾರ: 9 ಗಂಟೆಗಳ ವಿಚಾರಣೆ, 40 ಪ್ರಶ್ನೆಗಳು; ಶೀಘ್ರ ಆಶಿಶ್ ಮಿಶ್ರಾ ಬಂಧನ ಸಾಧ್ಯತೆ!

ಲಖಿಂಪುರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕ ಆಶಿಶ್ ಮಿಶ್ರಾ ಅವರನ್ನು ಪೊಲೀಸರು ಸುಮಾರು 9 ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಅವರನ್ನು ಯಾವುದೇ ಸಮಯದಲ್ಲಿ ಬಂಧಿಸಬಹುದು. 

ಲಖನೌ: ಲಖಿಂಪುರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕ ಆಶಿಶ್ ಮಿಶ್ರಾ ಅವರನ್ನು ಪೊಲೀಸರು ಸುಮಾರು 9 ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಅವರನ್ನು ಯಾವುದೇ ಸಮಯದಲ್ಲಿ ಬಂಧಿಸಬಹುದು. 

ಅಪರಾಧ ವಿಭಾಗವು ಮಿಶ್ರಾಗೆ ಸುಮಾರು 40 ಪ್ರಶ್ನೆಗಳನ್ನು ಕೇಳಿದೆ. ಇನ್ನು ಎಸ್ಐಟಿ ಆಶಿಶ್ ಗೆ ಘಟನೆಯ ದಿನ ಮಧ್ಯಾಹ್ನ 2:36ರಿಂದ 3:30 ರವರೆಗೆ ಎಲ್ಲಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ತೃಪ್ತಿದಾಯಕ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಈ ಮೊದಲು ಆಶಿಶ್ ಅವರನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಕರೆದರು, ಆದರೆ ಅವರು ಇಡೀ ದಿನ ಗೈರುಹಾಜರಾಗಿದ್ದರು. ಆಶಿಶ್ ಮಿಶ್ರಾ ಅವರು ಗಡುವಿನ 22 ನಿಮಿಷಗಳ ಮೊದಲು ಬೆಳಿಗ್ಗೆ 10.38 ಕ್ಕೆ ಕ್ರೈಂ ಬ್ರಾಂಚ್ ಕಚೇರಿಗೆ ತಲುಪಿದ್ದರು. ವಿಚಾರಣೆಯ ವಿಡಿಯೋವನ್ನು ಕೂಡ ಮಾಡಲಾಗುತ್ತಿದೆ.

ಡಿಐಜಿ ಉಪೇಂದ್ರ ಅಗರವಾಲ್ ಮತ್ತು ಲಖಿಂಪುರದ ಎಸ್‌ಡಿಎಂ ಕೂಡ ಆಶಿಶ್ ಮಿಶ್ರಾ ಅವರನ್ನು ಅಪರಾಧ ವಿಭಾಗದ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ಆಶಿಶ್ ಮಿಶ್ರಾ ಅವರ ಪರವಾಗಿ ಅನೇಕ ವೀಡಿಯೊಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರು 10 ಜನರ ಹೇಳಿಕೆಯ ಅಫಿಡವಿಟ್ ಅನ್ನು ಪೊಲೀಸರಿಗೆ ತೋರಿಸಿದ್ದಾರೆ. ಆಶಿಶ್ ಅವರ ವಕೀಲರು ಕೂಡ ಅಲ್ಲಿ ಇದ್ದಾರೆ.

ಐಪಿಸಿ ಸೆಕ್ಷನ್ 147, 148, 149 (ಗಲಭೆಗಳಿಗೆ ಸಂಬಂಧಿಸಿ), 279 (ಅಜಾಗರೂಕ ಚಾಲನೆ), 338 (ತನ್ನ ಜೀವಕ್ಕೆ ಅಪಾಯವನ್ನುಂಟುಮಾಡುವ ಯಾವುದೇ ವ್ಯಕ್ತಿಗೆ ನೋವುಂಟು ಮಾಡುವುದು), 304-ಎ (ನಿರ್ಲಕ್ಷ್ಯದಿಂದ ಸಾವು), ಆಶಿಶ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 302 (ಕೊಲೆ) ಮತ್ತು 120ಬಿ (ಕ್ರಿಮಿನಲ್ ಪಿತೂರಿ). ಆಶಿಶ್ ಬಂಧನಕ್ಕೆ ಸಂಬಂಧಿಸಿದಂತೆ ಇಡೀ ವಿರೋಧ ಪಕ್ಷ ಮತ್ತು ರೈತ ಸಂಘಟನೆಗಳು ಉತ್ತರಪ್ರದೇಶ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿವೆ.

ಅಕ್ಟೋಬರ್ 3 ರಂದು, ಲಖಿಂಪುರ್ ಖೇರಿಯಲ್ಲಿ ಥಾರ್ ಜೀಪ್ ಗುದ್ದಿದ್ದರಿಂದ ನಾಲ್ವರು ರೈತರು ಸಾವನ್ನಪ್ಪಿದ್ದರು. ಇದರ ನಂತರದ ಹಿಂಸಾಚಾರದಲ್ಲಿ ಇನ್ನೂ ನಾಲ್ಕು ಜನರು ಸಾವನ್ನಪ್ಪಿದರು. ಉತ್ತರಪ್ರದೇಶ ಸರ್ಕಾರವು ಎಲ್ಲಾ ಮೃತರ ಕುಟುಂಬಗಳಿಗೆ 45-45 ಲಕ್ಷ ರೂ.ಗಳ ಪರಿಹಾರವನ್ನು ನೀಡಿದೆ. ಇದರೊಂದಿಗೆ, ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT