ದೇಶ

ಲಖಿಂಪುರ್ ಹಿಂಸಾಚಾರವನ್ನು ಹಿಂದು vs ಸಿಖ್ ಕದನವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ: ಸಂಸದ ವರುಣ್ ಗಾಂಧಿ 

Sumana Upadhyaya

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯನ್ನು ಹಿಂದೂ-ಸಿಖ್ಖರ ನಡುವಿನ ಕದನ ಮಾಡಲು ನಡೆಸುತ್ತಿರುವ ಪ್ರಯತ್ನ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಎಚ್ಚರಿಸಿದ್ದಾರೆ. ಇದು ಅನೈತಿಕ ಮತ್ತು ತಪ್ಪು ಕ್ರಮ ಎಂದು ಟೀಕಿಸಿದ್ದಾರೆ.

ಈ ತಪ್ಪುಗಳನ್ನು ಸೃಷ್ಟಿಸುವುದು ದೇಶಕ್ಕೆ ಮತ್ತು ಸಮಾಜಕ್ಕೆ ಅಪಾಯಕಾರಿ ಮಾತ್ರವಲ್ಲದೆ ಗಾಯ ಆರಲು ತಲೆಮಾರುಗಳನ್ನು ತೆಗೆದುಕೊಂಡದ್ದನ್ನು ಮತ್ತೆ ಗಾಯವಾಗುವಂತೆ ಮಾಡುವುದು ಸರಿಯಲ್ಲ. ದೇಶದ ಐಕ್ಯತೆ ಮುಂದೆ ನಮ್ಮ ರಾಜಕೀಯ ಲಾಭಕ್ಕಾಗಿ ಕ್ಷುಲ್ಲಕ ವಿಷಯಗಳಿಗೆ ಹೊಡೆದಾಡಿ ನಾವು ಬುದ್ದಿಯಲ್ಲಿ ಸಣ್ಣತನ ತೋರಿಸಬಾರದು ಎಂದು ಸಹ ಟ್ವೀಟ್ ಮೂಲಕ ಹೇಳಿದ್ದಾರೆ.

ಲಖಿಂಪುರ್ ಖೇರಿಯಲ್ಲಿ ನ್ಯಾಯಕ್ಕಾಗಿ ಹೋರಾಟವು "ದುರಹಂಕಾರಿ ಸ್ಥಳೀಯ ಅಧಿಕಾರದ ಗಣ್ಯರ ಮುಂದೆ ಬಡ ರೈತರ ಕ್ರೂರ ಹತ್ಯಾಕಾಂಡವಾಗಿದ್ದು ಇದರಲ್ಲಿ ಯಾವುದೇ ಧಾರ್ಮಿಕ ಅರ್ಥವಿಲ್ಲ ಎಂದಿದ್ದಾರೆ. "ಖಲಿಸ್ತಾನಿ" ಎಂಬ ಪದವನ್ನು ಧಾರಾಳವಾಗಿ ಪ್ರತಿಭಟಿಸುವ ರೈತರಿಗೆ ಬಳಸುವುದು ನಮ್ಮ ಗಡಿಗಳಲ್ಲಿ ಹೋರಾಡಿ ರಕ್ತ ಚೆಲ್ಲಿದ ಈ ಹೆಮ್ಮೆಯ ಪುತ್ರರ ತಲೆಮಾರುಗಳಿಗೆ ಮಾಡಿದ ಅವಮಾನ ಮಾತ್ರವಲ್ಲದೆ, ಇದು ನಮ್ಮ ರಾಷ್ಟ್ರೀಯ ಏಕತೆಗೆ ಅತ್ಯಂತ ಅಪಾಯಕಾರಿ, ಜನರಲ್ಲಿ ತಪ್ಪು ರೀತಿಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ'' ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ತೆಗೆದುಹಾಕಲಾಗಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿರುವ ಸೀತಾಪುರದ ಲಖೀಂಪುರಖೇರಿಯಲ್ಲಿ ನಡೆದ ರೈತರ ಹತ್ಯೆ ಮತ್ತು ಹಿಂಸಾಚಾರ ಪ್ರಕರಣದ ಕುರಿತು ವರಣ್ ಗಾಂಧಿ ಸತತ ಟ್ವೀಟ್ ಮಾಡುತ್ತಿದ್ದರು. ಇಂದೂ ಕೂಡ ಹಿಂಸಾಚಾರಕ್ಕೆ ಜವಾಬ್ದಾರರನ್ನಾಗಿ ಮಾಡಬೇಕು ಎಂದು ಟ್ವೀಟ್ ಮಾಡುವ ಯಾರ ಹೆಸರನ್ನೂ ಹೇಳದೇ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಕಾರ್ಯಕಾರಿ ಸಮಿತಿ ರಚನೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. 

SCROLL FOR NEXT