ಸಾಂದರ್ಭಿಕ ಚಿತ್ರ 
ದೇಶ

ಜಾಗತಿಕ ಹಸಿವು ಸೂಚ್ಯಂಕ 2021: 101ನೇ ಸ್ಥಾನದಲ್ಲಿ ಭಾರತ

ಜಾಗತಿಕ ಹಸಿವು ಸೂಚ್ಯಂಕ 2021ರಲ್ಲಿ 116 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ರಿಂದ 101ನೇ ಸ್ಥಾನಕ್ಕೆ ಇಳಿದಿದ್ದು, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಕೆಳಸ್ಥಾನದಲ್ಲಿದೆ.

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ 2021ರಲ್ಲಿ 116 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ರಿಂದ 101ನೇ ಸ್ಥಾನಕ್ಕೆ ಇಳಿದಿದ್ದು, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಕೆಳಸ್ಥಾನದಲ್ಲಿದೆ.

ಚೀನಾ, ಭ್ರಜಿಲ್ ಮತ್ತು ಕುವೈತ್ ಸೇರಿದಂತೆ 18 ರಾಷ್ಟ್ರಗಳು ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿವೆ ಎಂದು  ಗ್ಲೋಬಲ್ ಹಂಗರ್ ಇಂಡೆಕ್ಸ್ ( ಜಿಹೆಚ್ ಐ)  ವೆಬ್ ಸೈಟ್ ಗುರುವಾರ ಹೇಳಿದೆ.

 ಐರಿಶ್ ನೆರವಿನ ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ  ವೆಲ್ಟ್ ಹಂಗರ್ ಹಿಲ್ಫೆ ಸಂಸ್ಥೆ ಜಂಟಿಯಾಗಿ ತಯಾರಿಸಿದ ವರದಿಯಂತೆ ಭಾರತದಲ್ಲಿ ಹಸಿವಿನ ಮಟ್ಟ  'ಆತಂಕಕಾರಿ' ಎಂದು ಬಣ್ಣಿಸಲಾಗಿದೆ. 

ಕಳೆದ ವರ್ಷ 107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು. ಇದೀಗ 116 ರಾಷ್ಟ್ರಗಳ ಪೈಕಿಯಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ.  ಭಾರತದ ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ 2012 ಮತ್ತು 2021 ರ ನಡುವೆ ಶೇ 28.5 ರಿಂದ ಶೇ. 27. 5ಕ್ಕೆ ಕುಸಿದಿದೆ. 

ಪಾಕಿಸ್ತಾನ ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನ 92ನೇ ಸ್ಥಾನದಲಿದ್ದರೆ, ನೇಪಾಳ (76) ಬಾಂಗ್ಲಾದೇಶ (76)   ಮತ್ತು ಮಾನ್ಮಾರ್ 71ನೇ ಸ್ಥಾನದಲ್ಲಿದೆ. ಆದರೆ, ಈ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕಡಿಮೆ ಪ್ರಮಾಣದ ಹಸಿವಿನ ಸಮಸ್ಯೆಯಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT