ದೇಶ

ಮುಂದಿನ ವರ್ಷ ಆಗಸ್ಟ್ 21 ರಿಂದ ಸೆಪ್ಟೆಂಬರ್ 20ರ ನಡುವೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ

Lingaraj Badiger

ನವದೆಹಲಿ: ಮುಂದಿನ ವರ್ಷ ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರ ನಡುವೆ ಹೊಸ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ)ಯ ಮಹತ್ವದ ಸಭೆಯ ನಂತರ ಘೋಷಿಸಲಾಗಿದೆ.

ಇಂದು ನಡೆದ ಸಿಡಬ್ಲ್ಯೂಸಿ ವಿವಿಧ ಹಂತಗಳಲ್ಲಿ ಸಾಂಸ್ಥಿಕ ಚುನಾವಣೆಗಳ ವೇಳಾಪಟ್ಟಿಗೆ ಅನುಮೋದನೆ ನೀಡಿದೆ. ಸುಮಾರು ಐದು ಗಂಟೆಗಳ ಕಾಲ ನಡೆದ ಸಿಡಬ್ಲ್ಯೂಸಿಯ ಸುದೀರ್ಘ ಸಭೆಯ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸಾಂಸ್ಥಿಕ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದರು. ಇದು ನವೆಂಬರ್ 1, 2021 ರಿಂದ ಪ್ರಾರಂಭವಾಗುವ ಚುನಾವಣೆಗೆ ಬೃಹತ್ ಸದಸ್ಯತ್ವ ಅಭಿ0ಯಾನವನ್ನು ಒಳಗೊಂಡಿದೆ ಮತ್ತು ಅದು ಮಾರ್ಚ್ 31, 2022
ರ ವರೆಗೆ ಮುಂದುವರಿಯುತ್ತದೆ ಎಂದರು.

ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿಗಳು, ಪಿಸಿಸಿ ಕಾರ್ಯನಿರ್ವಾಹಕರು ಮತ್ತು ಎಐಸಿಸಿ ಸದಸ್ಯರ ಪಿಸಿಸಿ ಸಾಮಾನ್ಯ ಮಂಡಳಿಗೆ ಜುಲೈ 21 ರಿಂದ ಆಗಸ್ಟ್ 20, 2022 ರ ನಡುವೆ ಚುನಾವಣೆ ನಡೆಯಲಿದೆ ಎಂದು ವೇಣುಗೋಪಾಲ್ ಅವರು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಆಗಸ್ಟ್ 21 ರಿಂದ ಸೆಪ್ಟೆಂಬರ್ 20, 2022 ರ ನಡುವೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸಿಡಬ್ಲ್ಯೂಸಿ ಸದಸ್ಯ ಸ್ಥಾನಕ್ಕೆ ಮತ್ತು ಎಐಸಿಸಿಯ ಇತರ ಸಂಸ್ಥೆಗಳ ಚುನಾವಣೆ ದಿನಾಂಕಗಳ ಕುರಿತು ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವೇಣುಗೋಪಾಲ್ ಅವರು ಹೇಳಿದ್ದಾರೆ.

ರಾಜಕೀಯ ಪರಿಸ್ಥಿತಿ, ಹಣದುಬ್ಬರ ಮತ್ತು ಭಾರತದ ರೈತರ ಮೇಲೆ "ಪೈಶಾಚಿಕ ದಾಳಿ"ಗೆ ಸಂಬಂಧಿಸಿದಂತೆ 
ಸಿಡಬ್ಲ್ಯೂಸಿ ಮೂರು ನಿರ್ಣಯಗಳನ್ನು ಅಂಗೀಕರಿಸಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT