ದೇಶ

ಪ್ರತ್ಯೇಕತಾವಾದಿ ನಾಯಕ ಗಿಲಾನಿ ಮೊಮ್ಮಗನನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದ ಜಮ್ಮು-ಕಾಶ್ಮೀರ ಆಡಳಿತ

Lingaraj Badiger

ಶ್ರೀನಗರ: ಪ್ರತ್ಯೇಕತಾವಾದಿ ನಾಯಕ ಮತ್ತು ಹುರಿಯತ್ ಅಧ್ಯಕ್ಷ ಸಯ್ಯದ್ ಅಲಿ ಗಿಲಾನಿ ನಿಧನರಾದ ಒಂದು ತಿಂಗಳ ನಂತರ, ಅವರ ಮೊಮ್ಮಗ ಅನೀಸ್-ಉಲ್-ಇಸ್ಲಾಂ ಅವರನ್ನು ಶನಿವಾರ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.

ಶೇರ್-ಇ-ಕಾಶ್ಮೀರ ಅಂತರಾಷ್ಟ್ರೀಯ ಕನ್ವೆನ್ಶನ್ ಸೆಂಟರ್(SKICC) ನಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅನೀಸ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ಆಡಳಿತ ವಜಾಗೊಳಿಸಿದೆ. ದೋಡಾದ ಶಿಕ್ಷಕನನ್ನು ಕೂಡ ಸರ್ಕಾರ ವಜಾ ಮಾಡಿದೆ.

"ಲೆಫ್ಟಿನೆಂಟ್ ಗವರ್ನರ್ ಅವರು, ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿದ ನಂತರ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಅನೀಸ್-ಉಲ್-ಇಸ್ಲಾಂ, SKICCಯ ಸಂಶೋಧನಾ ಅಧಿಕಾರಿಯ ಹುದ್ದೆಯಿಂದ ವಜಾಗೊಳಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತದ ಸಂವಿಧಾನದ 311 ನೇ ವಿಧಿಯ ಅಡಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಚಿಸಿದ ವಿಶೇಷ ಕಾರ್ಯಪಡೆಯ ಶಿಫಾರಸುಗಳ ಮೇರೆಗೆ ಈ ನೌಕರರನ್ನು ವಜಾ ಮಾಡಲಾಗಿದೆ.

ದೇಶ ವಿರೋಧಿ ಚಟುವಟಿಕೆ ಮತ್ತು "ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ" ಇದುವರೆಗೆ ಸುಮಾರು 30 ಸರ್ಕಾರಿ ಉದ್ಯೋಗಿಗಳನ್ನು ಸರ್ಕಾರ ವಜಾ ಮಾಡಿದೆ.

SCROLL FOR NEXT