ದೇಶ

ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಮೊದಲ ಬಾರಿಗೆ ಮುಂಬೈನಲ್ಲಿ ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ

Lingaraj Badiger

ಮುಂಬೈ: ಕಳೆದ ವರ್ಷ ಮಾರ್ಚ್‌ನಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಮುಂಬೈನಲ್ಲಿ ಭಾನುವಾರ ಮೊದಲ ಬಾರಿಗೆ ಕೋವಿಡ್ -19 ನಿಂದ ಒಂದೇ ಒಂದು ಸಾವು ವರದಿಯಾಗಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ 26, 2020ರ ನಂತರ ಮೊದಲ ಬಾರಿಗೆ ವಾಣಿಜ್ಯ ನಗರಿಯಲ್ಲಿ ಕೊರೋನಾ ಶೂನ್ಯ ಸಾವು ವರದಿಯಾಗಿದೆ. 

"ಇದು ಮುಂಬೈನಲ್ಲಿರುವ ನಮ್ಮೆಲ್ಲರಿಗೂ ಒಂದು ಒಳ್ಳೆಯ ಸುದ್ದಿ" ಎಂದು ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಅವರು ಹೇಳಿದ್ದಾರೆ.

ಮಾರ್ಚ್ 11, 2020 ರಂದು ಮುಂಬೈನಲ್ಲಿ  ಮೊದಲ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ ವರದಿಯಾಗಿತ್ತು ಮತ್ತು ಆರು ದಿನಗಳ ನಂತರ ಆ ವರ್ಷದ ಮಾರ್ಚ್ 17 ರಂದು ತನ್ನ ಮೊದಲ ಸಾವು ವರದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಕೊರೋನಾ ನಿಯಂತ್ರಿಸಲು ಅದ್ಭುತವಾಗಿ ಶ್ರಮಿಸಿದ ಮಹಾನಗರ ಪಾಲಿಕೆಯನ್ನು ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಇಕ್ಬಾಲ್ ಸಿಂಗ್ ಚಹಲ್ ಅವರು ಹೇಳಿದ್ದಾರೆ.

ಮುಂಬೈನಲ್ಲಿ ಇಂದು 367 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಆದರೆ ಮೊದಲ ಬಾರಿಗೆ ಯಾವುದೇ ಸಾವು ವರದಿಯಾಗಿಲ್ಲ.

SCROLL FOR NEXT