ಸಾಂದರ್ಭಿಕ ಚಿತ್ರ 
ದೇಶ

ಪಾಟ್ನಾ: ಮಹಿಳೆ ಮೇಲೆ ಒಂದು ವಾರ ನಿರಂತರ ಸಾಮೂಹಿಕ ಅತ್ಯಾಚಾರ, ಐವರ ಬಂಧನ

ಪಾಟ್ನಾದಲ್ಲಿ ವಿವಾಹಿತ ಮಹಿಳೆ ಮೇಲೆ ಐವರು ಪುರುಷರು ಒಂದು ವಾರ ನಿರಂತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಪಾಟ್ನಾ: ಪಾಟ್ನಾದಲ್ಲಿ ವಿವಾಹಿತ ಮಹಿಳೆ ಮೇಲೆ ಐವರು ಪುರುಷರು ಒಂದು ವಾರ ನಿರಂತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಪತಿಯೊಂದಿಗೆ ಅಕ್ಟೋಬರ್ 10ರಂದು ಜಗಳವಾಡಿ ಮನೆಯನ್ನು ಬಿಟ್ಟು ಹೋಗಿದ್ದರು. ಬಳಿಕ ಮಹಿಳೆ ಕೊಲ್ಕತ್ತಾಗೆ ಹೋಗಲು ನಿರ್ಧರಿಸಿ, ಪಾಟ್ನಾ ಜಂಕ್ಷನ್​ಗೆ ಬಂದಿದ್ದಾರೆ. ಅಲ್ಲಿಂದ ಮಹಿಳೆ ಹೋಟೆಲ್​ಗೆ ಹೋಗಿ, ಓನರ್​ ಬಳಿ ಕೊಲ್ಕತ್ತಾಗೆ ಹೋಗುವ ರೈಲಿನ ಬಗ್ಗೆ ಮಾಹಿತಿ ಕೇಳಿದ್ದಾರೆ.

ಹೋಟೆಲ್ ಮಾಲೀಕ ಗೋಪಾಲ್ ತನ್ನ ಸ್ನೇಹಿತ ಅಮಿತ್​ಗೆ ಮಹಿಳೆಯ ಬಗ್ಗೆ ಹೇಳಿದ್ದಾನೆ. ಬಳಿಕ ಇಬ್ಬರೂ ಆಕೆಯನ್ನು ಅಜಯ್ ಎಂಬ ಇನ್ನೊಬ್ಬ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಅವರು ಕಾರ್ಬಿಗಾಹಿಯಾ ಎಂಬ ಪ್ರದೇಶದ ಒಂದು ಕೊಠಡಿಯಲ್ಲಿ ರೈಲು ಬರುವವರೆಗೆ ಕಾಯುವಂತೆ ಮಹಿಳೆಗೆ ಹೇಳಿದ್ದಾರೆ ಎಂದು ಜಕ್ಕನಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ಕೆಪಿ ಶರ್ಮಾ ಹೇಳಿದ್ದಾರೆ.

ಅಕ್ಟೋಬರ್ 17 ರ ರಾತ್ರಿಯವರೆಗೆ ಸಂತ್ರಸ್ತೆಯನ್ನು ಆ ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಒಬ್ಬ ಆರೋಪಿ ಆಕೆಯ ಮೇಲೆ ಕಣ್ಣಿಡಲು 24 ಗಂಟೆ ಕೋಣೆಯ ಹೊರಗೆ ಕಾಯುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಕೊಲ್ಕತ್ತಾ ತಲುಪಲು ಸಂತ್ರಸ್ತೆ ವಿಫಲವಾದ ಕಾರಣ, ಆಕೆಯ ಪತಿ ಜಕ್ಕನಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಟವರ್ ಪರಿಶೀಲಿಸಿದ್ದು, ಅದು ಪಾಟ್ನಾ ಜಂಕ್ಷನ್ ಆಕೆಯ ಕೊನೆಯ ಸ್ಥಳವೆಂದು ತೋರಿಸಿದೆ. ಅದರಂತೆ, ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಯಿತು ಮತ್ತು "ಸ್ಥಳೀಯ ಗುಪ್ತಚರ ಮಾಹಿತಿ ಆಧಾರದ ಮೇಲೆ ನಾವು ಮಹಿಳೆ ಇರುವ ಮನೆಯನ್ನು ತಲುಪಿದೆವು" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT