ದೇಶ

ಕೋವಿಡ್19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,454 ಹೊಸ ಪ್ರಕರಣ, 160 ಸಾವು

Sumana Upadhyaya

ನವದೆಹಲಿ: ಕಳೆದ 24 ಗಂಟೆಗಳಲ್ಲಿ 18 ಸಾವಿರದ 454 ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 3 ಕೋಟಿಯ 41 ಲಕ್ಷದ 27 ಸಾವಿರದ 450ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ 1 ಲಕ್ಷದ 78 ಸಾವಿರದ 831ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 160 ಮಂದಿ ಬಲಿಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಇದುವರೆಗೆ ಮೃತಪಟ್ಟವರ ಸಂಖ್ಯೆ 4 ಲಕ್ಷದ 52 ಸಾವಿರದ 811ಕ್ಕೆ ತಲುಪಿದೆ. ಕಳೆದ 27 ದಿನಗಳಿಂದ ಸತತವಾಗಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ದಿನಕ್ಕೆ 30 ಸಾವಿರಕ್ಕಿಂತ ಕೆಳಗೆ ಬರುತ್ತಿದೆ. ಕಳೆದ 116 ದಿನಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ದಿನಕ್ಕೆ ಸತತವಾಗಿ 50 ಸಾವಿರಕ್ಕಿಂತ ಕಡಿಮೆ ಬರುತ್ತಿದೆ.

ನಿನ್ನೆ ಒಂದೇ ದಿನ 12 ಲಕ್ಷದ 47 ಸಾವಿರದ 506 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು ಇದುವರೆಗೆ 59 ಕೋಟಿಯ 57 ಲಕ್ಷದ 42 ಸಾವಿರದ 218 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಪ್ರತಿನಿತ್ಯ ಪಾಸಿಟಿವ್ ದರ ಶೇಕಡಾ 1.48ರಷ್ಟು ದಾಖಲಾಗುತ್ತಿದ್ದು, ಕಳೆದ 52 ದಿನಗಳಲ್ಲಿ ಶೇಕಡಾ 3ಕ್ಕಿಂತ ಕಡಿಮೆ ದಾಖಲಾಗಿದೆ. ವಾರಂಪ್ರತಿ ಪಾಸಿಟಿವ್ ದರ ಶೇಕಡಾ 1.34ರಷ್ಟು ದಾಖಲಾಗಿದೆ. ಕಳೆದ 118 ದಿನಗಳಲ್ಲಿಯೇ ಶೇಕಡಾ 3ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಾಯಿಲೆಯಿಂದ ಚೇತರಿಸಿಕೊಂಡ ಜನರ ಸಂಖ್ಯೆ 3 ಕೋಟಿಯ 34 ಲಕ್ಷದ 95 ಸಾವಿರದ 808 ಕ್ಕೆ ಏರಿದೆ, ಪ್ರಕರಣದ ಸಾವಿನ ಪ್ರಮಾಣವು 1.33 ಶೇಕಡಾ ದಾಖಲಾಗಿದೆ. ರಾಷ್ಟ್ರವ್ಯಾಪಿ ಕೋವಿಡ್ -19 ಲಸಿಕೆ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ಈವರೆಗೆ ನೀಡಲಾದ ಕೋವಿಡ್ ಡೊಸೇಜ್ 100 ಕೋಟಿ ಮೀರಿದೆ.

SCROLL FOR NEXT