ದೇಶ

ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಾಗಿ ಹರೀಶ್ ಚೌಧರಿ ನೇಮಕ

Nagaraja AB

ಚಂಡೀಘಡ: ಹರೀಶ್ ರಾವತ್  ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸ್ಥಾನ ತೊರೆದಿದ್ದು, ಅವರ ಜಾಗಕ್ಕೆ ಹರೀಶ್ ಚೌಧರಿ ಅವರನ್ನು ಶುಕ್ರವಾರ  ನೇಮಕ ಮಾಡಲಾಗಿದೆ. ಪಂಜಾಬಿನ ಎಐಸಿಸಿ ಕಾರ್ಯದರ್ಶಿಯಾಗಿರುವ ಚೌಧರಿ ಅವರನ್ನು ಪಂಜಾಬ್ ಉಸ್ತುವಾರಿಯಾಗಿ ನೇಮಿಸಲಾಗಿದೆ. 

ಮುಂಬರುವ ಉತ್ತರಾಖಂಡ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್ ಉಸ್ತುವಾರಿ ಜವಾಬ್ದಾರಿಯಿಂದ ತಮ್ಮಗೆ ಬಿಡುಗಡೆ ಮಾಡಬೇಕೆಂದು ರವಾತ್ ಒತ್ತಾಯದ ನಂತರ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ.

ಕೂಡಲೇ ಜಾರಿಗೆ ಬರುವಂತೆ ಪಂಜಾಬ್ ನ ಎಐಸಿಸಿ ಉಸ್ತುವಾರಿಯಾಗಿ ಹರೀಶ್ ಚೌಧರಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರು ನೇಮಕ ಮಾಡಿದ್ದಾರೆ. ಹರೀಶ್ ರಾವತ್ ಅವರನ್ನು ಪಂಜಾಬಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆಯಲಾಗಿದೆ ಎಂದು ಪಕ್ಷದ ಅಧಿಕೃತ ಹೇಳಿಕೆ ತಿಳಿಸಿದೆ. 

ಆದಾಗ್ಯೂ, ರಾವತ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮುಂದುವರೆಯಲಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಅವರ ಸೇವೆಗೆ ಪಕ್ಷ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

SCROLL FOR NEXT