ದೇಶ

ನಾಗಪಟ್ಟಿಣಂ: ಗಡಿ ದಾಟಿ ಬಂದು ಭಾರತದ ಕಡಲ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಶ್ರೀಲಂಕಾ ಮೀನುಗಾರರ ಬಂಧನ 

Sumana Upadhyaya

ನಾಗಪಟ್ಟಿಣಂ: ಕೊಡಿಯಕರೈ ಬಳಿ ಭಾರತ ಕಡಲ ತೀರ ಪ್ರದೇಶವನ್ನು ದಾಟಿ ಬಂದ ಇಬ್ಬರು ಶ್ರೀಲಂಕಾದ ಮೀನುಗಾರರನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಬಂಧಿಸಿದ್ದಾರೆ. 

ನಾಗಪಟ್ಟಿಣಂ ಜಿಲ್ಲೆಯ ಕೊಡಿಯಕರೈ ನೈರುತ್ಯ ಭಾಗದಲ್ಲಿ 16 ಮೈಲಿ ದೂರದಲ್ಲಿ ಸಮುದ್ರದಲ್ಲಿ ನಿನ್ನೆ ನಸುಕಿನ ಜಾವ 5.30ರ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಮೀನುಗಾರರು ಪತ್ತೆಯಾದರು. ಕೂಡಲೇ ಅವರನ್ನು ವಶಕ್ಕೆ ಪಡೆದು ಐಎನ್ಎಸ್ ಬಂಗರಾಮ್ ಹಡಗಿನಲ್ಲಿ ಮಧ್ಯರಾತ್ರಿ ವೇಳೆ ಕರೆತರಲಾಯಿತು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರು ಶ್ರೀಲಂಕಾದ ಜಫ್ನ ಜಿಲ್ಲೆಯ ವಲ್ವೆಟ್ಟಿತುರೈಯ 24 ವರ್ಷದ ಕೆ ಮಿಮಲತಸ್ ಮತ್ತು 23 ವರ್ಷದ ಡಿ ಕಜೀಪನ್ ಎಂದು ಗುರುತಿಸಲಾಗಿದೆ ಎಂದು ಕಡಲ ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಇಬ್ಬರು ಶ್ರೀಲಂಕಾದ ಮೀನುಗಾರರು ಅಂತಾರಾಷ್ಟ್ರೀಯ ಬಂದರು ಗಡಿರೇಖೆ(ಐಎಂಬಿಎಲ್)ನ್ನು ದಾಟಿ ಭಾರತದ ಸಮುದ್ರ ತೀರದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಅವರನ್ನು ವಶಕ್ಕೆ ಪಡೆದು ದೋಣಿಯನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನಾಗಪಟ್ಟಿಣಂ ಮೀನುಗಾರಿಕೆ ಇಲಾಖೆ ತಿಳಿಸಿದೆ.

ಕೋಸ್ಟಲ್ ಸೆಕ್ಯುರಿಟಿ ಗ್ರೂಪ್, ಇಬ್ಬರು ಶ್ರೀಲಂಕ ಮೀನುಗಾರರನ್ನು ಬಂಧಿಸಿ ವೇದಾರಣ್ಯಮ್ ಮೆರೈನ್ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಭಾರತದ ಸಾಗರ ವಲಯಗಳ ಕಾಯಿದೆ 1981 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದರು. ಗಡಿ ಭದ್ರತಾ ಪಡೆ ಸಿಬ್ಬಂದಿ ನಂತರ ಆರೋಪಿಗಳನ್ನು ಚೆನ್ನೈಗೆ ಕರೆದೊಯ್ದಿದ್ದಾರೆ. ಮೀನುಗಾರರನ್ನು ಎಗ್ಮೋರ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

SCROLL FOR NEXT