ಕಾಂಗ್ರೆಸ್ ಧ್ವಜದ ಚಿತ್ರ 
ದೇಶ

ಪಕ್ಷದ ಸದಸ್ಯತ್ವ ಸ್ವೀಕರಿಸುವವರು ಡ್ರಗ್ಸ್, ಮದ್ಯ ಸೇವನೆ ಮಾಡಬಾರದು- ಕಾಂಗ್ರೆಸ್ ನ ಹೊಸ ನಿಯಮ 

ಯಾರಾದರೂ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ವೀಕರಿಸಲು ಬಯಸುತ್ತಿದ್ದರೆ ಅಂತಹವರಿಗೆ ಕಾಂಗ್ರೆಸ್ ಪಕ್ಷ ಹೊಸ ನಿಯಮಗಳನ್ನು ವಿಧಿಸಿದೆ.

ನವದೆಹಲಿ: ಯಾರಾದರೂ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ವೀಕರಿಸಲು ಬಯಸುತ್ತಿದ್ದರೆ ಅಂತಹವರಿಗೆ ಕಾಂಗ್ರೆಸ್ ಪಕ್ಷ ಹೊಸ ನಿಯಮಗಳನ್ನು ವಿಧಿಸಿದೆ.

ಇನ್ನು ಮುಂದೆ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವವರು ಮದ್ಯ ಸೇವನೆ, ಡ್ರಗ್ಸ್ ಸೇವನೆಯಿಂದ ದೂರವಿರುವುದಾಗಿ ಘೋಷಿಸಿಕೊಳ್ಳಬೇಕಾಗಿದೆ, ಅಷ್ಟೇ ಅಲ್ಲದೇ ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ನಿಯಮಗಳನ್ನು ಟೀಕೆ ಮಾಡುವುದಿಲ್ಲ ಎಂಬ ಲಿಖಿತ ಭರವಸೆಯನ್ನೂ ನೀಡಬೇಕಾಗಿದೆ.

ಅತ್ಯಂತ ಪುರಾತನ ಪಕ್ಷದ ಸದಸ್ಯತ್ವದ ಅರ್ಜಿಯಲ್ಲಿ ಈ ನಿಬಂಧನೆಗಳನ್ನು ಸದಸ್ಯತ್ವ ಸ್ವೀಕರಿಸುತ್ತಿರುವವರು ಪೂರ್ಣಗೊಳಿಸಬೇಕಿದೆ. ಇವೆಲ್ಲದರ ಜೊತೆಗೆ ಕಾನೂನನ್ನು ಮೀರಿ ಆಸ್ತಿ ಮಾಡುವುದಿಲ್ಲ. ಪಕ್ಷ ಹೇಳಿದ ಕೆಲಸಗಳನ್ನು ತಪ್ಪದೇ ಪಾಲಿಸುವ ಭರವಸೆಗಳನ್ನು ಲಿಖಿತವಾಗಿ ನೀಡಬೇಕಿದೆ.

ಇದು ಅತ್ಯಂತ ಪುರಾತನ ಪಕ್ಷವಾಗಿದ್ದು, ನಮ್ಮ ಪಕ್ಷದ ಸಂವಿಧಾನದ ಭಾಗಗಳು ಇವುಗಳಾಗಿವೆ. "ಎಲ್ಲಾ ಕಾಂಗ್ರೆಸ್ ಸದಸ್ಯರು ಹಾಗೂ ಹೊಸ ಸದಸ್ಯರು ಈ ನಿಬಂಧನೆಗಳಿಗೆ ಪೂರಕವಾಗಿ ನಡೆದುಕೊಳ್ಳುವುದನ್ನು ನಿರೀಕ್ಷಿಸುತ್ತೇವೆ" ಎಂದು ಪಕ್ಷದ ಕೇಂದ್ರ ಚುನಾವಣಾ ವಿಭಾಗದ ಅಧ್ಯಕ್ಷರಾದ ಮಧುಸೂಧನ್ ಮಿಸ್ತ್ರಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ನವೆಂಬರ್ 1 ರಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದು 2022 ರ ಮಾರ್ಚ್ 31 ವರೆಗೂ ಈ ಅಭಿಯಾನ ನಡೆಯಲಿದೆ. ಈ ಬಳಿಕ ಮುಂದಿನ ವರ್ಷ ಆಗಸ್ಟ್ 21 ರಿಂದ ಸೆ.20 ರ ನಡುವೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT