ದೇಶ

ಮಧ್ಯ ಪ್ರದೇಶ: 2 ಡೋಸ್ ಲಸಿಕೆ ಪಡೆದ 6 ವ್ಯಕ್ತಿಗಳಲ್ಲಿ ಕೊರೋನಾ ವೈರಸ್‌ ಡೆಲ್ಟಾ ಪ್ಲಸ್ AY.4.2 ರೂಪಾಂತರಿ ಪತ್ತೆ

Lingaraj Badiger

ಇಂದೋರ್: ಮಧ್ಯ ಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಸಂಪೂರ್ಣ ಎರಡೂ ಡೋಸ್ ಲಸಿಕೆ ಪಡೆದ ಆರು ವ್ಯಕ್ತಿಗಳಲ್ಲಿ ಹೊಸ ಕೊರೋನಾ ವೈರಸ್ ಡೆಲ್ಟಾ ಪ್ಲಸ್ ಎವೈ.4.2 ರೂಪಾಂತರಿ ಸೋಂಕಿಗೆ ಒಳಗಾಗಿದ್ದಾರೆ.

"ದೆಹಲಿ ಮೂಲದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್(ಎನ್‌ಸಿಡಿಸಿ)ನಿಂದ ಪಡೆದ ವರದಿಯ ಪ್ರಕಾರ, ಆರು ವ್ಯಕ್ತಿಗಳು ಕೊರೋನಾ ವೈರಸ್‌ನ AY.4.2 ರೂಪಾಂತರಿ ಸೋಂಕಿಗೆ ಒಳಗಾಗಿದ್ದಾರೆ. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಸೆಪ್ಟೆಂಬರ್‌ನಲ್ಲಿ ಕಳುಹಿಸಲಾಗಿತ್ತು ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ(ಸಿಎಂಎಚ್‌ಒ) ಬಿಎಸ್ ಸಾಹಿತ್ಯ ಅವರು ಸೋಮವಾರ ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಕಳೆದ 19 ತಿಂಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ AY.4.2 ರೂಪಾಂತರ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

AY.4.2 ವೇರಿಯಂಟ್ ಸೋಂಕಿಗೆ ಒಳಗಾದ ಎಲ್ಲಾ ಆರು ವ್ಯಕ್ತಿಗಳಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ. ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದಾರೆ ಎಂದು ಸಾಹಿತ್ಯ ಅವರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಈ ಆರು ಜನರ ಸಂಪರ್ಕಕ್ಕೆ ಬಂದ 5 ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT