ದೇಶ

ಉತ್ತರಪ್ರದೇಶ ಚುನಾವಣೆ: ಜನತೆಗೆ ರೂ.10 ಲಕ್ಷದವರೆಗೆ ಉಚಿತ ಚಿಕಿತ್ಸೆ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ

Manjula VN

ನವದೆಹಲಿ: ಉತ್ತರ ಪ್ರದೇಶದಲ್ಲಿ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್​ ಪಕ್ಷಗಳು ಮತದಾರರಿಗೆ ಆಶ್ವಾಸನೆಗಳನ್ನ ನೀಡೋದ್ರಲ್ಲಿ ಬ್ಯುಸಿ ಆಗಿವೆ. ಅದರಂತೆ.. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಪಕ್ಷವನ್ನ ಅಧಿಕಾರಕ್ಕೆ ತಂದರೆ, ಅನಾರೋಗ್ಯ ಪೀಡಿತ ವ್ಯಕ್ತಿಗೆ 10 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಅಲ್ಲದೇ ವಿವಿಧ ಆರೋಗ್ಯ ಸೇವೆಯನ್ನ ಸರ್ಕಾರದಿಂದ ನೀಡಲಾಗುತ್ತದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೊರೋನಾ ಸಾಂಕ್ರಾಮಿಕ ರೋಗ  ಸಂದರ್ಭದಲ್ಲಿ ಯೋಗಿ ಸರ್ಕಾರ ರಾಜ್ಯದ ಜನರನ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತ್ತು. ರಾಜ್ಯದಲ್ಲಿನ ಆರೋಗ್ಯ ವ್ಯವಸ್ಥೆ ಹದಗೆಟ್ಟಿರೋದನ್ನ ಆ ಸಂದರ್ಭದಲ್ಲಿ ಜನ ನೋಡಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಕಾಂಗ್ರೆಸ್​ ಒಂದು ನಿರ್ಧಾರಕ್ಕೆ ಬಂದಿದೆ. ಅದು ಏನಂದರೆ ನಮ್ಮ ಪಕ್ಷವನ್ನ ಅಧಿಕಾರಕ್ಕೆ ತಂದರೆ ರಾಜ್ಯದ ಜನರಿಗೆ ಅಗ್ಗದ ದರದಲ್ಲಿ ಮತ್ತು ಉತ್ತಮ ಚಿಕಿತ್ಸೆ ನೀಡುವ ಭರವಸೆಯನ್ನ ನೀಡುತ್ತಿದ್ದೇವೆ. ‘ಯಾವುದೇ ಕಾಯಿಲೆಗೆ 10 ಲಕ್ಷ ರೂಪಾಯಿ ವರೆಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಸಿಗಲಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಪ್ರತಿಜ್ಞಾ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ 7 ಆಶ್ವಾಸನೆಗಳನ್ನ ನೀಡಿದ್ದರು. ಅದರಲ್ಲಿ ರೈತರ ಸಾಲ ಮನ್ನಾ, 20 ಲಕ್ಷ ಉದ್ಯೋಗ ಸೃಷ್ಟಿ, ಉಚಿತ ವಿದ್ಯುತ್​, 12ನೇ ತರಗತಿವರೆಗೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್​ಫೋನ್, ವಿದ್ಯಾರ್ಥಿನಿಯರಿಗೆ ಇ-ಸ್ಕೂಟರ್ ಸೇರಿದಂತೆ ಅನೇಕ ಆಶ್ವಾನೆಗಳನ್ನ ನೀಡಿದ್ದರು.

SCROLL FOR NEXT