ದೇಶ

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಂದಾಗಿ ಭಾರತ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸಲು ಸಮರ್ಥವಾಗಿದೆ: ಪಿಎಂ ನರೇಂದ್ರ ಮೋದಿ 

Sumana Upadhyaya

ನವದೆಹಲಿ: ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜಯಂತಿ ಅಕ್ಟೋಬರ್ 31ರಂದು ಏಕತಾ ದಿನವನ್ನು ಆಚರಿಸಲಾಗುತ್ತದೆ. ದೆಹಲಿಯಲ್ಲಿಂದು ವರ್ಚುವಲ್ ಮೂಲಕ ರಾಷ್ಟ್ರೀಯ ಏಕತಾ ದಿನ ಅಂಗವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಟೇಲ್ ಅವರ ಸ್ಪೂರ್ತಿಯಿಂದ ಭಾರತ ಆಂತರಿಕವಾಗಿ ಮತ್ತು ಬಾಹ್ಯವಾಗಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಮರ್ಥವಾಗಿದೆ ಎಂದಿದ್ದಾರೆ.

ಇಂದು ಪಟೇಲ್ ಅವರ ಸ್ಪೂರ್ತಿಯಿಂದಾಗಿ ಭಾರತ ಆಂತರಿಕವಾಗಿ ಮತ್ತು ಬಾಹ್ಯವಾಗಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸು ಸಮರ್ಥವಾಗಿದೆ. ಕಳೆದ ಏಳು ವರ್ಷಗಳಲ್ಲಿ ದೇಶ ಹಲವು ದಶಕಗಳ ಅನಗತ್ಯ ಕಾನೂನುಗಳಿಂದ ಹೊರಬಂದಿದೆ.ನಾವೆಲ್ಲರೂ ಒಟ್ಟಾಗಿ ನಿಂತರೆ ನಮ್ಮ ಗುರಿಯನ್ನು ತಲುಪಬಹುದು. ಸರ್ದಾರ್ ವಲ್ಲಭಬಾಯಿ ಪಟೇಲ್ ಯಾವತ್ತಿಗೂ ಭಾರತ ಬಲವಾದ, ಅಂತರ್ಗತ, ಸೂಕ್ಷ್ಮ, ಎಚ್ಚರಿಕೆ, ವಿನಯಶೀಲ ಮತ್ತು ಅಭಿವೃದ್ಧಿ ಹೊಂದಬೇಕೆಂದು ಬಯಸುತ್ತಿದ್ದರು. ದೇಶದ ಹಿತಾಸಕ್ತಿಗೆ ಅವರು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಎಂದರು.

ರಾಷ್ಟ್ರೀಯ ಏಕತಾ ದಿನದ ಧ್ಯೇಯ ಒಂದೇ ಭಾರತ, ಶ್ರೇಷ್ಠ ಭಾರತ ಎಂಬುದಾಗಿದೆ. ಇಂದು ಭಾರತ ದೇಶ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 146ನೇ ಜಯಂತಿಯನ್ನು ಆಚರಿಸುತ್ತಿದ್ದು ದೇಶದ ಜನರೆಲ್ಲರೂ ಒಗ್ಗಟ್ಟಾಗಿದ್ದರೆ ಅಭಿವೃದ್ಧಿ ಹೊಂದಬಹುದು ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. 

SCROLL FOR NEXT