ದೇಶ

ಎಸ್ಎಂಎಸ್ ಹುಡುಗಿ 'ಮೀನಾ' ಆಮಿಷ ಒಡ್ಡಿ ಪುರುಷರನ್ನು ವಂಚಿಸುವ ಜಾಲ ಪತ್ತೆ!

Harshavardhan M

ಕೊಚ್ಚಿ: ಯುವತಿ ಜೊತೆ ಸ್ನೇಹ ಮತ್ತು ಪ್ರೀತಿ ಮಾಡಲು ಈ ಸಂಖ್ಯೆಗೆ ಕರೆ ಮಾಡಿ ಎನ್ನುವ ಸಂದೇಶವನ್ನು ಕಳುಹಿಸಿ ವಂಚನೆ ಎಸಗುವ ಜಾಲವನ್ನು ಕೇರಳ ಪೊಲೀಸರು ಬಯಲಿಗೆಳೆದಿದ್ದಾರೆ. ನಾಗರಿಕರು ಈ ಜಾಲದ ಬಗ್ಗೆ ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. 

ಯಾರಾದರೂ ವ್ಯಕ್ತಿಗಳು ಇಂಥಾ ಸಂದೇಶಗಳನ್ನು ನಂಬಿ ಕರೆ ಮಾಡಿದಲ್ಲಿ ಅವರ ಕರೆಯನ್ನು ವಂಚಕರು ರೆಕಾರ್ಡ್ ಮಾಡಿಕೊಳ್ಳುತ್ತಾರೆ. ನಂತರ ಅದನ್ನು ಮುಂದಿರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕರು ಕಳಿಸುವ ಸಂದೇಶ ಹೀಗಿರುತ್ತದೆ.

ಡಿಯರ್,
ನೀವು ಏಕಾಂಗಿತನ ಅನುಭವಿಸುತ್ತಿದ್ದೀರಾ? ನೀವು ಇರುವ ಜಾಗದ ಬಳಿ ನಿಮಗೆ ಮಾತನಾಡಲು, ಪ್ರೀತಿಸಲು, ಸ್ನೇಹ ಸಂಪಾದಿಸಲು ಗೆಳತಿ ಬೇಕಾಗಿದ್ದಾರೆಯೇ? ಹಾಗಾದರೆ ಕೆಳಗೆ ನೀಡಲಾಗಿರುವ ಮೀನಾ ನಂಬರ್ ಗೆ ಕಾಲ್ ಮಾಡಿ.

ಈ ರೀತಿಯ ಎಸ್ಸೆಮ್ಮೆಸ್ ಸಂದೇಶಗಳನ್ನು ಪ್ರತಿದಿನ ಸಾವಿರಾರು ಮಂದಿಗೆ ಕಳಿಸಲಾಗುತ್ತದೆ. ದಿನಕ್ಕೆ ಒಂದೆರಡು ಬಕರಾಗಳನ್ನಾದರೂ ಹಿಡಿಯುವುದು ವಂಚಕರ ಗುರಿಯಾಗಿರುತ್ತದೆ. ಈ ರೀತಿ ವಂಚನೆಗೆ ಒಳಗಾದವರು ಪೊಲೀಸ್ ದೂರು ನೀಡುವುದಿಲ್ಲ ಎಂದು ವಂಚಕರಿಗೆ ಖಚಿತವಾಗಿ ಗೊತ್ತು. ಹೀಗಾಗಿಯೇ ನಾಗರಿಕರು ಎಚ್ಚರದಿಂದಿರುವಂತೆ ಪೊಲೀಸರು ತಿಳಿಸಿದ್ದಾರೆ. 

SCROLL FOR NEXT