ದೇಶ

ತಿಪ್ಪೆ ರಾಶಿ ಮೇಲೆ ಫೋಟೊ ಶೂಟ್ ಮಾಡಿಸಿಕೊಂಡ ಮಾಡೆಲ್: ತ್ಯಾಜ್ಯ ವಿಲೇವಾರಿ ಸಮಸ್ಯೆಯತ್ತ ಗಮನ ಸೆಳೆಯುವ ಪ್ರಯತ್ನ 

Harshavardhan M

ರಾಂಚಿ: ಮಾಡೆಲಿಂಗ್ ಫೋಟೊ ಶೂಟ್ ಮಾಡಿಸಿಕೊಳ್ಳುವವರು ಪಾರ್ಕು, ಐಶಾರಾಮಿ ಮನೆಗಳು, ಸ್ಟುಡಿಯೋ ಮತ್ತಿತರ ಕಡೆಗಳಿಗೆ ತೆರಳುತ್ತಾರೆ. ಆದರೆ ಇಲ್ಲೊಬ್ಬಳು ಹುಡುಗಿ ಸಾವಿರಾರು ಟನ್ ಗಳಷ್ಟು ಪ್ರಮಾಣದ ತಿಪ್ಪೆಯನ್ನು ಸುರಿಯಲಾದ ಜಾಗದಲ್ಲಿ, ತಿಪ್ಪೆ ರಾಶಿ ಮಧ್ಯ ಓಡಾಡುತ್ತಾ ಫೋಟೊ ಶೂಟ್ ಮಾಡಿಸಿಕೊಂಡಿದ್ದಾಳೆ. 

ಆಕೆಯ ಈ ಫೋಟೊ ಶೂಟ್ ಗೆ ಜಗತ್ತಿನೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಏಕೆಂದರೆ ಈ ಹುಡುಗಿ ಈ ಜಾಗದಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಕಸ ವಿಲೇವಾರಿ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು. ಅಂದ ಹಾಗೆ ಪ್ರಾಂಜಲ್ ಸುರಭಿ ಎನ್ನುವ ಹೆಸರಿನ ಈ ರೂಪದರ್ಶಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

ರಾಂಚಿಯ ಹೊರವಲಯದಲ್ಲಿ ನಗರದ ಕಸವೆಲ್ಲವನ್ನೂ ಸುರಿಯಲಾಗುತ್ತಿದೆ. ಸುತ್ತಮುತ್ತಲಿನವರು ಅದರಿಂದ ತೊಂದರೆ ಅನುಭವಿಸುತ್ತಿದ್ದಾರೆ. 

ಅಂತಾರಾಷ್ಟ್ರೀಯ ಫೋಟೊ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ 119 ದೇಶಗಳ 7000 ಫೋಟೋಗಳಲ್ಲಿ ಸುರಭಿಯ ಫೋಟೋ ಕೂಡಾ ಸೇರಿದೆ ಎನ್ನುವುದು ಸಂತಸದ ಸಂಗತಿ.

SCROLL FOR NEXT