ದೇಶ

ಪ್ರತ್ಯೇಕತಾವಾದಿ ನಾಯಕ ಗಿಲಾನಿ ಅಂತ್ಯಕ್ರಿಯೆ: ಕಾಶ್ಮೀರದಲ್ಲಿ ನಿರ್ಬಂಧ, ಮೊಬೈಲ್ ಸೇವೆಗಳು ಸ್ಥಗಿತ

Srinivas Rao BV

ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ, ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷ ಸಯೀದ್ ಅಲಿ ಗಿಲಾನಿ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 

ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಸೇವೆಗಳನ್ನು ಹೊರತುಪಡಿಸಿ ಬೇರೆ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು  ಸ್ಥಗಿತಗೊಳಿಸಲಾಗಿದೆ. ಗಿಲಾನಿ ನಿವಾಸದ ಬಳಿ ಇದ್ದ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.

ಅಂತ್ಯಕ್ರಿಯೆಯಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ನೆರೆಯವರಿಗೆ ಮಾತ್ರ ಭಾಗಿಯಾಗಲು ಅನುಮತಿ ನೀಡಲಾಗಿತ್ತು. ಗಿಲಾನಿ ನಿಧನದ ಬೆನ್ನಲ್ಲೇ ಬುಧವಾರ ರಾತ್ರಿ ಅಧಿಕಾರಿಗಳು ಶ್ರೀನಗರದಲ್ಲಿ ನಿರ್ಬಂಧ ವಿಧಿಸಿ ಸಾರ್ವಜನಿಕ ಸಂಚಾರವನ್ನು ನಿರ್ಬಧಿಸಿದ್ದರು.

ಗಿಲಾನಿ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದ್ದು, ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 2010 ರಿಂದ ಗಿಲಾನಿ ಗೃಹಬಂಧನದಲ್ಲಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸಿತ್ತು. 

SCROLL FOR NEXT