ದೇಶ

ಅಕ್ರಮ ಮತಾಂತರ: ಉತ್ತರ ಪ್ರದೇಶ ಪೊಲೀಸರಿಂದ 8 ಮಂದಿ ಬಂಧನ

Lingaraj Badiger

ಲಖನೌ: 1,000 ಕ್ಕಿಂತಲೂ ಹೆಚ್ಚು ಜನರನ್ನು ಅಕ್ರಮವಾಗಿ ಮತಾಂತರಗೊಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆ(ಎಟಿಎಸ್) ಜೂನ್ ನವರೆಗೆ 8 ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧ "ದೇಶದ ವಿರುದ್ಧ ಯುದ್ಧ ಸಾರಿದ" ಆರೋಪ ಹೊರಿಸಲಾಗಿದೆ.

ಎಟಿಎಸ್ ಮನವಿಯನ್ನು ಸ್ವೀಕರಿಸಿದ ಲಖನೌ ವಿಶೇಷ ನ್ಯಾಯಾಲಯವು, ಸೆಕ್ಷನ್ 121-ಎ ಮತ್ತು 123, 
ಐಪಿಸಿ ಸೆಕ್ಷನ್ 121 ಅಡಿ ಕೇಸ್ ದಾಖಲಿಸಿಕೊಂಡಿದೆ.

ಆರಂಭದಲ್ಲಿ, ಆರೋಪಿಗಳ ವಿರುದ್ಧ ಎಫ್ಐಆರ್ ನಲ್ಲಿ 121 ಎ ಮತ್ತು 123 ಅನ್ನು ಸೇರಿಸಲು ಅನುಮತಿ ಪಡೆಯಲು ಲಖನೌದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ರಾಜ್ಯ ಎಟಿಎಸ್ ಮನವಿ ಸಲ್ಲಿಸಿತ್ತು. ಆದರೆ ಸಿಜೆಎಂ, ಸ್ಥಳೀಯ ನ್ಯಾಯಾಲಯಗಳಿಗೆ ಐಪಿಸಿ ಸೆಕ್ಷನ್ 121 ಮತ್ತು 123 ಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿಲ್ಲ ಎಂಬುದನ್ನು ಅರಿತ ಎಟಿಎಸ್, ವಿಶೇಷ ನ್ಯಾಯಾಲಯದ ಮೊರೆ ಹೋಗಿದೆ.

ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ಸೆಕ್ಷನ್ 121 ಎ ಮತ್ತು 123 ಅನ್ನು ಸೇರಿಸಲು ಅವಕಾಶ ನೀಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಿದೆ.

SCROLL FOR NEXT