ದೇಶ

ಉತ್ತರ ಪ್ರದೇಶದಲ್ಲಿ ಇಂದು ಕೊರೋನಾದಿಂದ ಒಂದು ಸಾವು, 18 ಮಂದಿಗೆ ಪಾಸಿಟಿವ್

Lingaraj Badiger

ಲಖನೌ: ಉತ್ತರ ಪ್ರದೇಶ ಭಾನುವಾರ ಕೊರೋನಾದಿಂದ ಕೇವಲು ಒಬ್ಬರು ಮಾತ್ರ ಮೃತಪಟ್ಟಿದ್ದು, 18 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಉತ್ತರ ಪ್ರದೇಶದಲ್ಲಿ ಕೊರೋನಾದಿಂದ ಇದುವರೆಗೆ ಒಟ್ಟ 22,856 ಮಂದಿ ಮೃತಪಟ್ಟಿದ್ದಾರೆ ಮತ್ತು 17,09,445 ಮಂದಿಗೆ ಸೋಂಕು ತಗುಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ರಾಯ್ ಬರೇಲಿಯಿಂದ ಇಂದು ಒಂದು ಸಾವು ವರದಿಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

18 ಹೊಸ ಕರಣಗಳಲ್ಲಿ ತಲಾ ಮೂರು ಗ್ವಾಟಮ್ ಬುದ್ಧ ನಗರ ಮತ್ತು ಜಲೌನ್ ನಿಂದ ವರದಿಯಾಗಿದ್ದರೆ, ಎರಡು ರಾಯ್ ಬರೇಲಿಯಿಂದ ವರದಿಯಾಗಿವೆ. 

24 ಗಂಟೆಗಳ ಅವಧಿಯಲ್ಲಿ, 31 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಇದುವರೆಗೆ ರಾಜ್ಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 16,86,354ಕ್ಕೆ ತಲುಪಿದೆ.

ರಾಜ್ಯದಲ್ಲಿ ಇನ್ನೂ 235 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ, ರಾಜ್ಯದಲ್ಲಿ 2.34 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SCROLL FOR NEXT