ದೇಶ

ಸಿಐಡಿ ಸಮನ್ಸ್: ಸುವೇಂದು ಅಧಿಕಾರಿಗೆ ಕಲ್ಕತ್ತಾ ಹೈಕೋರ್ಟ್ ನಿಂದ ಮಧ್ಯಂತರ ರಿಲೀಫ್

Lingaraj Badiger

ಕೋಲ್ಕತ್ತಾ: ಅಪರಾಧ ತನಿಖಾ ಇಲಾಖೆ(ಸಿಐಡಿ) ಸಮನ್ಸ್ ಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಗೆ ಮಧ್ಯಂತರ ರಿಲೀಫ್ ನೀಡಿದೆ.

ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ರಾಜ್ ಶೇಖರ್ ಮಂಥಾ ಅವರು ಮಾರ್ಚ್ 18, 2021 ರಂದು ಕಾಂಟೈ ಪೊಲೀಸ್ ಠಾಣೆ ಮತ್ತು ನಂದಿಗ್ರಾಮ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದಾರೆ.

"ಮಾಣಿಕ್ತಲ್ಲ ಮತ್ತು ತಮ್ಲುಕ್ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ತನಿಖೆ ಮುಂದುವರಿಯಬಹುದು. ಆದರೆ ಅಧಿಕಾರಿ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು. ಅರ್ಜಿದಾರರು ಕೇಳಿದ ಯಾವುದೇ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಬೇಕು ಸದ್ಯಕ್ಕೆ. ಎಫ್‌ಐಆರ್‌ನಲ್ಲಿ ಸುವೇಂದು ಅಧಿಕಾರಿಯ ಹೆಸರಿಲ್ಲದ ಕಾರಣ ವಿಚಾರಣೆ ಮುಂದುವರಿಯಲು ಅನುಮತಿ ನೀಡಲಾಗುವುದು ಮತ್ತು ಅವರು ತನಿಖಾ ಅಧಿಕಾರಿಗಳೊಂದಿಗೆ ಸಹಕರಿಸುತ್ತಾರೆ" ಎಂದು ಕೋರ್ಟ್ ಹೇಳಿದೆ.

"ಅವರು ವಿರೋಧ ಪಕ್ಷದ ನಾಯಕರಾಗಿರುವುದರಿಂದ, ಅವರು ಬಯಸಿದ ಸ್ಥಳದಲ್ಲಿ ವಿಚಾರಣೆ ನಡೆಸಬೇಕು. ವಿವರವಾದ ಕಾರಣವನ್ನು ನಂತರ ಅನುಸರಿಸಲಾಗುವುದು" ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಸತ್ಯಾಂಶಗಳನ್ನು ಪರಿಗಣಿಸಿ, ಅಧಿಕಾರಿಯ ಹೆಸರಿರುವ ಎಫ್ಐಆರ್ ಅನ್ನು ತಡೆಹಿಡಿಯಲಾಗಿದೆ. 

ಸುಭಬ್ರತ ಚಕ್ರವರ್ತಿಯ ಅಸಹಜ ಸಾವಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕ ಸುವೇಂದು ಅಧಿಕಾರಿಗೆ ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳ ಸಿಐಡಿ ಸಮನ್ಸ್ ನೀಡಿದೆ.

SCROLL FOR NEXT