ದೇಶ

ರಕ್ತ ಹೀರುವ ರಾಕ್ಷಸನಿಗೆ ಸಿಎಂ ಯೋಗಿ ಆದಿತ್ಯನಾಥ್ ಹೋಲಿಕೆ: ಉತ್ತರ ಪ್ರದೇಶ ಮಾಜಿ ರಾಜ್ಯಪಾಲ ವಿರುದ್ಧ ಪ್ರಕರಣ

Srinivas Rao BV

ರಾಮ್ ಪುರ: ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ರಕ್ತ ಹೀರುವ ರಾಕ್ಷಸನಿಗೆ ಹೋಲಿಕೆ ಮಾಡಿ ನೀಡಿದ್ದ ಹೇಳಿಕೆಯ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಆಜೀಜ್ ಖುರೇಷಿ ವಿರುದ್ಧ ಪ್ರಕರಣ ದಾಖಲಾಗಿದೆ. 

ಬಿಜೆಪಿ ಕಾರ್ಯಕರ್ತ ಆಕಾಶ್ ಸಕ್ಸೇನಾ ರಾಮ್ ಪುರ ಜಿಲ್ಲೆಯಲ್ಲಿ ಸಿವುಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನ ಆಧಾರದಲ್ಲಿ ಪೊಲೀಸರು ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿದ್ದಾರೆ. 

ಸೆಕ್ಷನ್ 124ಎ (ರಾಷ್ಟ್ರದ್ರೋಹ) 153 ಎ ( ಧರ್ಮಗಳ ನಡುವೆ ದ್ವೇಷ ಹರಡುವುದು) 153 ಬಿ ( ಸೂಚನೆಗಳು, ಪ್ರತಿಪಾದನೆಗಳು ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕಾರಕ) 505 (1) (ಬಿ) ಜನತೆಯಲ್ಲಿ ಆತಂಕ ಮೂಡಿಸುವ ಯತ್ನದ ಆರೋಪದಡಿ ಮಾಜಿ ರಾಜ್ಯಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

"ಖುರೇಷಿ ಅವರು ರಾಮ್ ಪುರದಲ್ಲಿರುವ ನಾಯಕ ಆಜಮ್ ಖಾನ್ ನಿವಾಸಕ್ಕೆ ತೆರಳಿದ್ದು, ಶಾಸಕರು ಹಾಗೂ ಖಾನ್ ಅವರ ಪತ್ನಿ ತನ್ಜೀಮ್ ಫಾತೀಮಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ದೆವ್ವ- ರಕ್ತ ಹೀರುವ ರಾಕ್ಷಸನಿಗೆ ಹೋಲಿಕೆ ಮಾಡಿದ್ದರು" ಎಂದು ಸಕ್ಸೇನಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 

ಖುರೇಷಿ ಅವರ ಹೇಳಿಕೆ ವಿವಾದಾತ್ಮಕವಾಗಿದ್ದು, ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುವಂತದ್ದಾಗಿದೆ ಎಂದು ಸಕ್ಸೇನಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು. 

SCROLL FOR NEXT