ದೇಶ

ತಮಿಳುನಾಡಿನಲ್ಲಿ 1,544 ಹೊಸ ಕೊರೋನಾ ಪ್ರಕರಣ, 19 ಸಾವು

Lingaraj Badiger

ಚೆನ್ನೈ: ತಮಿಳುನಾಡು ಮಂಗಳವಾರ 1,544 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,25,778ಕ್ಕೆ ತಲುಪಿದೆ. 

ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿನಿಂದ 19 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 35,055 ಕ್ಕೆ ಏರಿದೆ. ತಮಿಳುನಾಡಿನ ನಾಲ್ಕು ಜಿಲ್ಲೆಗಳು ಗರಿಷ್ಠ ಸಂಖ್ಯೆಯ ಹೊಸ ಪ್ರಕರಣಗಳು ವರದಿಯಾಗಿವೆ.

ಕೊಯಮತ್ತೂರಿನಲ್ಲಿ 217 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದರೆ, ಚೆನ್ನೈನಲ್ಲಿ 194 ಪ್ರಕರಣಗಳು ದಾಖಲಾಗಿದ್ದು, ಚೆಂಗಲ್ಪಟ್ಟುವಿನಲ್ಲಿ 112 ಮತ್ತು ಈರೋಡ್‌ನಲ್ಲಿ 112 ಪ್ರಕರಣಗಳು ವರದಿಯಾಗಿವೆ.

ನೆರೆಯ ಕೇರಳದಲ್ಲಿ ಮುಂದುವರಿದ ಪಾಸಿಟಿವ್ ಪ್ರಮಾಣ ಮತ್ತು ಹೆಚ್ಚಿನ ಪ್ರಕರಣಗಳನ್ನು ಪರಿಗಣಿಸಿ, ತಮಿಳುನಾಡು ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಸೆಪ್ಟೆಂಬರ್ 12 ರಿಂದ ಮೆಗಾ ಕೋವಿಡ್ -19 ಲಸಿಕೆ ಶಿಬಿರಗಳನ್ನು ನಡೆಸಲು ಮುಂದಾಗಿದೆ ಎಂದು ತಮಿಳುನಾಡು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ ಸುಬ್ರಮಣಿಯನ್ ಮಾಹಿತಿ ನೀಡಿದ್ದಾರೆ.

ತಮಿಳುನಾಡು ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು 1,576 ಕೊರೋನಾ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 25,74,518 ಕ್ಕೆ ತಲುಪಿದೆ.

SCROLL FOR NEXT