ನಿಫಾ ವೈರಾಣು ಐಸೊಲೇಷನ್ ವಾರ್ಡ್ (ಸಂಗ್ರಹ ಚಿತ್ರ) 
ದೇಶ

ನಿಫಾ ವೈರಾಣು ಪತ್ತೆಗೆ ಟ್ರೂನ್ಯಾಟ್ ಕಿಟ್: ಡಿಸಿಜಿಐ ಅನುಮೋದನೆ

ಕೋವಿಡ್-19 ಮಾದರಿಯಲ್ಲೇ ನಿಫಾ ವೈರಾಣು ಪತ್ತೆಗೆ ಟ್ರೂನ್ಯಾಟ್ ಟೆಸ್ಟ್ ಕಿಟ್ ಗಳ ಬಳಕೆಗೆ ಭಾರತದ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ.

ಬೆಂಗಳೂರು: ಕೋವಿಡ್-19 ಮಾದರಿಯಲ್ಲೇ ನಿಫಾ ವೈರಾಣು ಪತ್ತೆಗೆ ಟ್ರೂನ್ಯಾಟ್ ಟೆಸ್ಟ್ ಕಿಟ್ ಗಳ ಬಳಕೆಗೆ ಭಾರತದ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ.
        
ಟ್ರೂನ್ಯಾಟ್-ಎಂಟಿಬಿ ನಿಫಾ ವೈರಸ್ ಕಿಟ್ ಗಳಿಗೆ ವಾಣಿಜ್ಯ ಉತ್ಪಾದನೆ ಪರವಾನಗಿಗೆ ತುರ್ತು ಅನುಮೋದನೆ ದೊರೆತಿದೆ.

2018 ರಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾದಾಗ ಗೋವಾ ಮೂಲದ ಭಾರತದ ಮೊಲ್ಬಿಯೊ ಡಯಾಗ್ನೋಸ್ಟಿಕ್ಸ್ ಎಂಬ ಸಂಸ್ಥೆ ಈ ಕಿಟ್ ಗಳನ್ನು ಅಭಿವೃದ್ಧಿಪಡಿಸಿತ್ತು.

ಈ ಕಿಟ್ ಗಳ ಮೂಲಕ ನಿಫಾ ವೈರಾಣುಗಳನ್ನು ತ್ವರಿತವಾಗಿ ಪತ್ತೆ ಮಾಡಬಹುದಾಗಿದೆ. ಟಿಬಿ, ಕೋವಿಡ್-19, ಹೆಪಿಟೈಟಿಸ್ ಗಳಿಗೆ ಟ್ರೂನ್ಯಾಟ್ ಟೆಸ್ಟ್ ಗಳು ಈಗಾಗಲೇ ಲಭ್ಯವಿದ್ದು ಈಗ ನಿಫಾ ವೈರಾಣುಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಲು ಈ ಕಿಟ್ ಗಳು ಸಹಕಾರಿಯಾಗಿದೆ.

ಸಂಸ್ಥೆಯ ಸಿಇಒ ಶ್ರೀರಾಮ್ ನಟರಾಜನ್ ಈ ಬಗ್ಗೆ ಮಾತನಾಡಿದ್ದು, ಕೋವಿಡ್-19 ಸೋಂಕು, ಸಾಂಕ್ರಾಮಿಕಗಳ ತ್ವರಿತ ಪತ್ತೆ, ನಿಖರ ಪರೀಕ್ಷೆಯ ಮಹತ್ವವನ್ನು ಕೋವಿಡ್-19 ನಮಗೆ ತಿಳಿಸಿಕೊಟ್ಟಿದೆ. ಟ್ರೂನ್ಯಾಟ್ ಡಿಜಿಸಿಐ ನಿಂದ ನಿಫಾ ವೈರಾಣು ಪತ್ತೆ ಮಾಡಲು ಅನುಮೋದನೆ ಪಡೆದಿರುವ ಮೊದಲ ವೇದಿಕೆಯಾಗಿದ್ದು, 30 ರೋಗಗಳನ್ನು ಪತ್ತೆ ಮಾಡಬಹುದಾಗಿದ್ದು, ಫಲಿತಾಂಶ ಬರಲು ಒಂದು ಗಂಟೆಗಿಂತ ಕಡಿಮೆ ಅವಧಿ ಬೇಕಾಗುತ್ತದೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ