ದೇಶ

ಪಂಜಾಬ್: ಒಂದೂ ಡೋಸ್ ಲಸಿಕೆ ತೆಗೆದುಕೊಳ್ಳದ ಸರ್ಕಾರಿ ನೌಕರರಿಗೆ ಕಡ್ಡಾಯ ರಜೆ

Lingaraj Badiger

ಚಂಡಿಗಢ: ರಾಜ್ಯ ಸರ್ಕಾರಿ ನೌಕರರು ವೈದ್ಯಕೀಯ ಕಾರಣ ಹೊರತುಪಡಿಸಿ ಇತರೆ ಯಾವುದೇ ಕಾರಣಕ್ಕೂ ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳಲು ವಿಫಲರಾದರೆ ಸೆಪ್ಟೆಂಬರ್ 15 ರ ನಂತರ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಶುಕ್ರವಾರ ಘೋಷಿಸಿದ್ದಾರೆ.

ರಾಜ್ಯದ ಜನರನ್ನು ಕಾಯಿಲೆಯಿಂದ ರಕ್ಷಿಸಲು ಮತ್ತು ಲಸಿಕೆ ಹಾಕಿಸಿಕೊಂಡವರು ಹಿಂಜರಿಕೆಗೆ ಬೆಲೆ ನೀಡಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂದು ನಡೆದ ಉನ್ನತ ಮಟ್ಟದ ವರ್ಚುವಲ್ ಕೋವಿಡ್ ಪರಿಶೀಲನಾ ಸಭೆಯಲ್ಲಿ, ವಿಶ್ಲೇಷಿಸಿದ ದತ್ತಾಂಶದಿಂದ ಲಸಿಕೆಯ ಪರಿಣಾಮಕಾರಿತ್ವವು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರ.

ಸಭೆಯಲ್ಲಿ ಸರ್ಕಾರಿ ಉದ್ಯೋಗಿಗಳನ್ನು ತಲುಪಲು ವಿಶೇಷ ಪ್ರಯತ್ನಗಳನ್ನು ಮಾಡಲಾಯಿತು ಮತ್ತು ಇದುವರೆಗೂ ಮೊದಲ ಡೋಸ್ ಲಸಿಕೆ ಪಡೆಯದವರು, ಲಸಿಕೆ ಪಡೆಯುವವರೆಗೆ ರಜೆಯಲ್ಲಿರುವಂತೆ ಕೇಳಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

SCROLL FOR NEXT