ಸಾಂದರ್ಭಿಕ ಚಿತ್ರ 
ದೇಶ

ಮಹಿಳಾ ಕಾನ್‌ಸ್ಟೆಬಲ್ ಜತೆ ರಾಸಲೀಲೆ ವಿಡಿಯೋ ವೈರಲ್, ರಾಜಸ್ಥಾನ ಪೊಲೀಸ್ ಅಧಿಕಾರಿ ಬಂಧನ

ಆರು ವರ್ಷದ ಮಗನ ಮುಂದೆಯೇ ಮಹಿಳಾ ಕಾನ್ಸ್​ಟೇಬಲ್​ ಜತೆ ರಾಸಲೀಲೆಯಲ್ಲಿ ತೊಡಗಿದ್ದ ರಾಜಸ್ಥಾನ ಪೊಲೀಸ್​​ ಸೇವಾ (ಆರ್‌ಪಿಎಸ್)ಅಧಿಕಾರಿಯನ್ನು ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ...

ಜೈಪುರ: ಆರು ವರ್ಷದ ಮಗನ ಮುಂದೆಯೇ ಮಹಿಳಾ ಕಾನ್ಸ್​ಟೇಬಲ್​ ಜತೆ ರಾಸಲೀಲೆಯಲ್ಲಿ ತೊಡಗಿದ್ದ ರಾಜಸ್ಥಾನ ಪೊಲೀಸ್​​ ಸೇವಾ (ಆರ್‌ಪಿಎಸ್)ಅಧಿಕಾರಿಯನ್ನು ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ) ಶುಕ್ರವಾರ ಬಂಧಿಸಿದೆ.  

ಮಹಿಳಾ ಕಾನ್‌ಸ್ಟೆಬಲ್ ತನ್ನ ಅಪ್ರಾಪ್ತ ಮಗುವಿನ ಮುಂದೆಯೇ ಪೊಲೀಸ್ ಅಧಿಕಾರಿಯ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸುಮಾರು ಎರಡು ನಿಮಿಷಗಳ ವಿಡಿಯೋವೊಂದು ವೈರಲ್​​ ಆಗಿತ್ತು. 

ವಿಡಿಯೋ ವೈರಲ್ ಆಗುತ್ತಿದಂತೆ ಸೆಪ್ಟೆಂಬರ್ 8 ರಂದು ಪ್ರಾಥಮಿಕ ತನಿಖೆಯ ನಂತರ ಅಧಿಕಾರಿ ಮತ್ತು ಮಹಿಳಾ ಕಾನ್ಸ್ಟೇಬಲ್ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು. 

ಅಜ್ಮೇರ್ ಜಿಲ್ಲೆಯ ಬೇವಾರ್ ನಲ್ಲಿ ಆರೋಪಿ ಅಧಿಕಾರಿ ಹೀರಾ ಲಾಲ್ ಸೈನಿ, ಸರ್ಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ಸಹ ಕೆಲಸ ಮಾಡುತ್ತಿದ್ದರು. ಹೀರಾಲಾಲ್ ಸೈನಿ ಅವರನ್ನು ಗುರುವಾರ ರಾತ್ರಿ ರೆಸಾರ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದ್ದು, ಇಂದು ಬಂಧಿಸಲಾಗಿದೆ ಎಂದು ಎಡಿಜಿಪಿ(ಎಟಿಎಸ್ & ಎಸ್ಒಜಿ) ಅಶೋಕ್ ರಾಥೋಡ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಅಧಿಕಾರಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸೈನಿ ಈಜುಕೊಳದಲ್ಲಿ ಕಾನ್‌ಸ್ಟೇಬಲ್ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳಾ ಕಾನ್‌ಸ್ಟೆಬಲ್ ನ ಆರು ವರ್ಷದ ಮಗ ಅದೇ ಕೊಳದಲ್ಲೇ ಇರುತ್ತದೆ.

ಇನ್ನೂ ಮಹಿಳಾ ಕಾನ್ಸ್​ಟೇಬಲ್​​ ಬಂಧನವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಹಿಳಾ ಕಾನ್ಸ್​ಟೇಬಲ್​ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

Demographic manipulation: ಒಳನುಸುಳುವಿಕೆಗಿಂತ ಸಾಮಾಜಿಕ ಸಾಮರಸ್ಯಕ್ಕೆ ಇದೇ 'ದೊಡ್ಡ ಅಪಾಯ'- ಪ್ರಧಾನಿ ಮೋದಿ

SCROLL FOR NEXT