ದೇಶ

ವಿಜಯ್ ರೂಪಾನಿಯ ಮೃಧು ಸ್ವಭಾವ ಮುಖ್ಯಮಂತ್ರಿ ಹುದ್ದೆಗೆ ಕುತ್ತು ತಂದೀತೆ? ವೀಕ್ಷಕರು ಏನಂತಾರೆ

Nagaraja AB

ಅಹಮದಾಬಾದ್: ವಿಜಯ್ ರೂಪಾನಿ ಅವರ ಮೃದು ಸ್ವಭಾವ ದುರ್ಬಲ ಮುಖ್ಯಮಂತ್ರಿ ಎಂಬ ಇಮೇಜ್ ಗೆ ಕಾರಣವಾಗಿರಬಹುದು,  ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಧಿಕಾರಿಶಾಹಿಗೆ ರಾಜಕೀಯ ನಾಯಕತ್ವ ಮೀರಿದ ಅವಕಾಶ ನೀಡಿದ್ದರು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯನ್ನು ಅವರು ನಿಭಾಯಿಸಿದ ರೀತಿ ಮತ್ತು ಅದರಿಂದ ಆದ ಆರ್ಥಿಕ ಮತ್ತು ಸಾಮಾಜಿಕ ಒತ್ತಡಗಳು ಕೂಡಾ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳಲು ಕಾರಣವಾಗಿರಬಹುದು ಎಂದು ಕೆಲ ವೀಕ್ಷಕರು ಹೇಳಿದ್ದಾರೆ.

ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ವಿಜಯ್ ರೂಪಾನಿ, ಅಂತರ್ ಧರ್ಮೀಯ ವಿವಾಹ ಮತ್ತು ಗೋ ಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಬಿಜೆಪಿಯ ಪ್ರಮುಖ ಪಾತ್ರ ವಹಿಸಿದ್ದರು, ಗುಜರಾತಿನಲ್ಲಿ ಪಕ್ಷ ಸಂಘಟಿಸುವಲ್ಲಿ ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದ ರೂಪಾನಿ ಕೊಡುಗೆ ನೀಡಿದ್ದರು.

ರಂಗೂನ್ ಜಿಲ್ಲೆಯಲ್ಲಿ ಜನಿಸಿದ್ದ ರೂಪಾನಿ ಬಾಲ್ಯದಲ್ಲಿಯೇ ಆರ್ ಎಸ್ ಎಸ್ ಶಾಖೆ ಸೇರಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2016ರಲ್ಲಿ ರೂಪಾನಿ ಮುಖ್ಯಮಂತ್ರಿಯಾಗುವ ಮುನ್ನ ಗುಜರಾತಿನ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜ್ ಕೋಟ್ ಪಶ್ಟಿಮ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ 2014ರಲ್ಲಿ ಮೊದಲ ಬಾರಿಗೆ ಅವರು ಗುಜರಾತ್ ವಿಧಾನಸಭೆ ಪ್ರವೇಶಿಸಿದ್ದರು.

SCROLL FOR NEXT