ದೇಶ

ಕಬ್ಬಿನ ಬೆಲೆ ಹೆಚ್ಚಿಸಿ, ಪಿಎಂ ಕಿಸಾನ್ ನಿಧಿ ಡಬಲ್ ಮಾಡಿ: ಉತ್ತರ ಪ್ರದೇಶ ಸಿಎಂಗೆ ಬಿಜೆಪಿ ಸಂಸದ ವರುಣ್ ಗಾಂಧಿ ಪತ್ರ

Lingaraj Badiger

ನವದೆಹಲಿ: ಉತ್ತರ ಪ್ರದೇಶದ ರೈತರಿಗೆ ವಿವಿಧ ಪರಿಹಾರ ಕ್ರಮಗಳನ್ನು ಕೋರಿ, ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.

ಕಬ್ಬಿನ ಬೆಲೆಗಳಲ್ಲಿ ಗಣನೀಯ ಏರಿಕೆ ಮಾಡುವಂತೆ, ಗೋಧಿ ಮತ್ತು ಭತ್ತದ ಮೇಲಿನ ಬೋನಸ್ ಹೆಚ್ಚಿಸಬೇಕು ಹಾಗೂ ಪಿಎಂ ಕಿಸಾನ್ ಯೋಜನೆಯ ಹಣವನ್ನು ಡಬಲ್ ಮಾಡಬೇಕು. ಡೀಸೆಲ್ ಮೇಲಿನ ಸಬ್ಸಿಡಿ ಮೊತ್ತವನ್ನು ದ್ವಿಗುಣಗೊಳಿಸಬೇಕು ಎಂದು ಉತ್ತರ ಪ್ರದೇಶ ಸಿಎಂಗೆ ಮೂರು ಬಾರಿ ಸಂಸದರಾಗಿರುವ ವರುಣ್ ಗಾಂಧಿ ಒತ್ತಾಯಿಸಿದ್ದಾರೆ.

ಪ್ರತಿಭಟನಾ ನಿರತ ರೈತರೊಂದಿಗೆ ಸರ್ಕಾರ ಮತ್ತೆ ಮಾತುಕತೆ ನಡೆಸಬೇಕು ಎಂದು ಆದಿತ್ಯನಾಥ್ ಗೆ ಬರೆದ ಬರೆದ ಎರಡು ಪುಟಗಳ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಪಿಲಿಭಿತ್ ಸಂಸದ ವರುಣ್ ಗಾಂಧಿ ಅವರು ತಮ್ಮ ಪತ್ರದಲ್ಲಿ ರೈತರ ಎಲ್ಲಾ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಅದೇ ಸಮಯದಲ್ಲಿ ಅದಕ್ಕೆ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ.

ತಮ್ಮ ಟ್ವಿಟರ್ ನಲ್ಲಿ ಸಿಎಂಗೆ ಬರೆದ ಪತ್ರವನ್ನು ವರುಣ್ ಗಾಂಧಿ ಟ್ಯಾಗ್ ಮಾಡಿದ್ದು, "ಮಣ್ಣಿನ ಮಕ್ಕಳ ಸಮಸ್ಯೆಗಳನ್ನು ಆಲಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪತ್ರದಲ್ಲಿ, ಗಾಂಧಿ ಅವರು ಕಬ್ಬಿನ ಮಾರಾಟ ಬೆಲೆಯನ್ನು ಪ್ರತಿ ಕ್ವಿಂಟಾಲ್‌ ಗೆ 400 ರೂ. ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಪ್ರತಿ ಕ್ವಿಂಟಾಲ್‌ಗೆ 315 ರೂ. ಇದೆ.

SCROLL FOR NEXT