ದೇಶ

'ಕೆಲ ನಾಯಕರಿಂದ ಜಿ-23 ದುರುಪಯೋಗ'; ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬೇಕು: ವೀರಪ್ಪ ಮೊಯ್ಲಿ

Lingaraj Badiger

ನವದಹೆಲಿ: ಕೆಲವು ನಾಯಕರು ಜಿ -23 ಅನ್ನು "ದುರುಪಯೋಗ" ಪಡಿಸಿಕೊಂಡಿದ್ದಾರೆ ಎಂದಿರುವ ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಈಗಾಗಲೇ ಪಕ್ಷದ ಸುಧಾರಣೆ ನಡೆಯುತ್ತಿರುವುದರಿಂದ ಯಾರಾದರೂ ಅದರ ಸಾಂಸ್ಥೀಕರಣವನ್ನು ಮುಂದುವರೆಸಿದರೆ ಅದು "ಪಟ್ಟಭದ್ರ ಹಿತಾಸಕ್ತಿ" ಎಂದು ಭಾನುವಾರ ಪ್ರತಿಪಾದಿಸಿದ್ದಾರೆ.

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಕ್ಕೆ ತಮ್ಮ ಬೆಂಬಲ ನೀಡಿದ 
ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಅವರ ಪಕ್ಷ ಸೇರ್ಪಡೆಯನ್ನು ವಿರೋಧಿಸುವವರು "ಸುಧಾರಣಾ ವಿರೋಧಿ"ಗಳು ಎಂದಿದ್ದಾರೆ.

ಕಳೆದ ವರ್ಷ ಸೋನಿಯಾ ಗಾಂಧಿಗೆ ಪತ್ರ ಬರೆದ 23 ನಾಯಕರಲ್ಲಿ ಮೊಯ್ಲಿ ಸಹ ಒಬ್ಬರಾಗಿದ್ದು, ಜಿ -23 ರ ಸಾಂಸ್ಥಿಕೀಕರಣವನ್ನು ವಿರೋಧಿಸಿದ್ದಾರೆ. "ನಮ್ಮಲ್ಲಿ ಕೆಲವರು ಪಕ್ಷದ ಸುಧಾರಣೆಗಾಗಿ ಮಾತ್ರ ನಮ್ಮ ಸಹಿ ಪಡೆದರು. ಅದು ಪಕ್ಷವನ್ನು ಪುನರ್ನಿರ್ಮಾಣ ಮಾಡಲು, ಅದನ್ನು ನಾಶಮಾಡಲು ಅಲ್ಲ.

"ನಮ್ಮ ಕೆಲವು ನಾಯಕರು ಜಿ -23 ಅನ್ನು ದುರುಪಯೋಗಪಡಿಸಿಕೊಂಡರು ಎಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈ ಮೊದಲು ಸಾಂಸ್ಥಿಕ ಚುನಾವಣೆ ವೇಳೆ ಮತ್ತೆ ರಾಹುಲ್ ಗಾಂಧಿ ಅವರಿಗೆ ನಾಯಕತ್ವ ಪಟ್ಟ ಕಟ್ಟಲು ಸಿದ್ಧತೆಗಳು ನಡೆದಾಗ 23 ನಾಯಕರು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ರಾಹುಲ್ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಂದಿನಿಂದ ಜಿ-23 ನಾಯಕರ ಗುಂಪು ಸಕ್ರಿಯವಾಗಿದ್ದು, ಕಾಂಗ್ರೆಸ್ ಹೈಕಮಾಂಡ್‍ನೊಂದಿಗೆ ಮುಸುಕಿನ ಗುದ್ದಾಟ ನಡೆಸುತ್ತಲೇ ಇದೆ.

SCROLL FOR NEXT