ದೇಶ

ಕೋವ್ಯಾಕ್ಸಿನ್ ಗೆ ವಾರಾಂತ್ಯದ ವೇಳೆಗೆ ಡಬ್ಲ್ಯುಹೆಚ್ಒ ಅನುಮೋದನೆ ನಿರೀಕ್ಷೆ

Srinivas Rao BV

ನವದೆಹಲಿ: ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಗೆ ವಿಶ್ವಆರೋಗ್ಯ ಸಂಸ್ಥೆಯ ಅನುಮೋದನೆ ವಾರಾಂತ್ಯದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

ಕೋವ್ಯಾಕ್ಸಿನ್ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುವ ಲಸಿಕೆಯಾಗಿದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗಳನ್ನು ಸಂಸ್ಥೆ ಸಲ್ಲಿಸಿದ್ದು, ಔಷಧಗಳ ಗುಣಮಟ್ಟ ನಿಯಂತ್ರಕ  ಕೇಂದ್ರ ಸಂಸ್ಥೆಯ ವಿಷಯ ತಜ್ಞರ ಸಮಿತಿಗೆ ಸಲ್ಲಿಸಿರುವ ವರದಿಯಲ್ಲಿ ಶೇ.78 ರಷ್ಟು ಪರಿಣಾಮಕಾರಿತ್ವವನ್ನು ಸಂಸ್ಥೆ ತೋರಿಸಿದೆ.

ಜೂನ್ ತಿಂಗಳಲ್ಲಿ ಲಸಿಕೆಯ ಡಬ್ಲ್ಯುಹೆಚ್ಒ ತುರ್ತು ಬಳಕೆ ಪಟ್ಟಿ ಪ್ರಕ್ರಿಯೆ ವರದಿ ಸಲ್ಲಿಕೆ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಈ ಹಿಂದೆ ಡಬ್ಲ್ಯುಹೆಚ್ಒ ಮುಖ್ಯ ವಿಜ್ಞಾನಿ ಡಾ ಸೌಮ್ಯಾ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿ ಕೋವ್ಯಾಕ್ಸಿನ್ ಅನುಮೋದನೆ ವಿಷಯದ ಬಗ್ಗೆ ಚರ್ಚಿಸಿದ್ದರು.

ಡಬ್ಲ್ಯುಹೆಚ್ಒ ಲಸಿಕೆ ವಿಭಾಗದ ಸಹಾಯಕ ಮಹಾನಿರ್ದೇಶಕರಾದ ಮರಿಯಾನ್ನೆ ಸಿಮಾವೊ ಈ ಲಸಿಕೆಗೆ ವಿಶ್ವಸಂಸ್ಥೆ ಮೌಲ್ಯಮಾಪನ ಸಾಕಷ್ಟು ಮುಂದುವರಿದಿದ್ದು ಸೆಪ್ಟೆಂಬರ್ ಮಧ್ಯಭಾಗದಲ್ಲಿ ನಿರ್ಧಾರ ಪ್ರಕಟವಾಗುವ ಸಾಧ್ಯತೆಯನ್ನು ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಐಸಿಎಂಆರ್, ರಾಷ್ಟ್ರೀಯ ವೈರಾಲಜಿ ಇನ್ಸ್ಟಿಟ್ಯೂಟ್ ಸಹಯೋಗವಿದೆ.

SCROLL FOR NEXT