ದೇಶ

ತಮಿಳು ದೇವ ಭಾಷೆ: ಮದ್ರಾಸ್ ಹೈಕೋರ್ಟ್

Srinivas Rao BV

ಚೆನ್ನೈ: ತಮಿಳು ಭಾಷೆ ದೇವರುಗಳ ಭಾಷೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಅರುಣಗಿರಿನಾಥರ್ ಸೇರಿದಂತೆ ಆಳ್ವಾರರು ಮತ್ತು ನಯನ್ಮಾರರು ರಚಿಸಿದ ತಮಿಳು ಸ್ತುತಿಗೀತೆಗಳನ್ನು ಬಳಕೆ ಮಾಡಬೇಕೆಂದು ಹೇಳಿದೆ.

"ನ್ಯಾ. ಎನ್ ಕೃಪಾಕರನ್, ನ್ಯಾ. ಪುಗಲೆಂದಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಮ್ಮ ಇತ್ತೀಚಿನ ಆದೇಶದಲ್ಲಿ ಸಂಸ್ಕೃತ ಮಾತ್ರವೇ ದೇವ ಭಾಷೆ" ಎಂದು ನಂಬಿಸಲಾಗಿದೆ ಎಂದು ಹೇಳಿದೆ.

ಹಲವು ದೇಶ, ಧರ್ಮಗಳಲ್ಲಿ, ಹಲವು ರೀತಿಯ ನಂಬಿಕೆಗಳಿವೆ ಹಾಗೂ ಸಂಸ್ಕೃತಿ ಹಾಗೂ ಧರ್ಮದ ಪ್ರಕಾರ ಪೂಜೆಯ ಸ್ಥಳಗಳೂ ಬದಲಾವಣೆಯಾಗಿವೆ, ಇಂತಹ ಪ್ರದೇಶಗಳಲ್ಲಿ ಕೇವಲ ಸ್ಥಳೀಯ ಭಾಷೆಗಳಲ್ಲಿ ಪೂಜೆಗಳನ್ನು ಮಾಡಲಾಗುತ್ತದೆ. ಆದರೆ ದೇಶದಲ್ಲಿ ಸಂಸ್ಕೃತ ಮಾತ್ರವೇ ದೇವ ಭಾಷೆ, ಉಳಿದದ್ದು ಯಾವುದೂ ಸಮಾನವಲ್ಲವೆಂದು ನಂಬಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

SCROLL FOR NEXT