ದೇಶ

'ಕೆಬಿಸಿ 13' ಚೆಕ್ ಅನ್ನು ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಬಳಸಲು ಕೋಲ್ಕತ್ತಾ ವೈದ್ಯೆ ಡಾ. ಸಂಚಾಲಿ ನಿರ್ಧಾರ

Lingaraj Badiger

ಮುಂಬೈ: ವೈದ್ಯರಾಗುವುದು ಎಂದರೆ ಉದಾತ್ತ ವೃತ್ತಿಯ ಭಾಗವಾಗುವುದು ಎಂದರ್ಥ ಮತ್ತು ಕೋಲ್ಕತ್ತಾದ ವೈದ್ಯೆ ಡಾ. ಸಂಚಾಲಿ ಚಕ್ರವರ್ತಿ ಅವರು ತಮ್ಮ ಸಮಾಜಮುಖಿ ಗುರಿಗಳೊಂದಿಗೆ ಅದನ್ನು ಸಾಬೀತುಪಡಿಸಿದ್ದಾರೆ.

ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುಬೇಕು ಎಂಬುದು ಡಾ. ಸಂಚಾಲಿ ಅವರ ಮಹತ್ವಾಕಾಂಕ್ಷೆಯಾಗಿದೆ ಮತ್ತು ಆಕೆಯ ಇನ್ನೊಂದು ಗುರಿ ಹೋಟೆಲ್ ನಿರ್ಮಿಸುವುದು. 

ಕೋಲ್ಕತ್ತಾದ ಮಕ್ಕಳ ವೈದ್ಯ ಡಾ.ಚಕ್ರವರ್ತಿ ಅವರು ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ 'ಕೌನ್ ಬನೇಗಾ ಕರೋಡ್ಪತಿ 13' ರಲ್ಲಿ 6,40,000 ರೂ. ಗೆದ್ದಿದ್ದು, ಆ ಹಣದಿಂದ ತಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

2016 ರಲ್ಲಿ ಚೀನಾದ ಗುವಾಂಗ್ ಝೂದ ದಕ್ಷಿಣ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರುವ ಸಂಚಾಲಿ ಅವರು, ಕೋಲ್ಕತ್ತಾದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಮತ್ತು ಸೇಠ್ ಸುಖಲಾಲ್ ಕರ್ಣಾನಿ ಸ್ಮಾರಕ ಆಸ್ಪತ್ರೆಯಿಂದ ಡಾಕ್ಟರೇಟ್ ಪಡೆದಿದ್ದಾರೆ.

ಕೆಬಿಸಿ 13ರಲ್ಲಿ ಭಾಗವಹಿಸಿ 6,40,000 ರೂ.ಗಳನ್ನು ಗೆದ್ದಿರುವ ಡಾ. ಸಂಚಾಲಿ ಚಕ್ರವರ್ತಿ ಅವರು, "ಇದು ನನ್ನ ಜೀವನದ ಅತ್ಯುತ್ತಮ ದಿನಗಳು, ನಾನು ಈ ದೀರ್ಘಾವಧಿಯ ಗುರಿಯತ್ತ ಕೆಲಸ ಮಾಡಲು ಪ್ರಾರಂಭಿಸುತ್ತೇನೆ. ಹೋಟೆಲ್ ನಿರ್ಮಿಸುವ ಕನಸು ನನಗೆ ಇದೆ. ನಾನು ಕೂಡ ಅದರತ್ತ ಕೆಲಸ ಮಾಡುತ್ತೇನೆ ಎಂದಿದ್ದಾರೆ.

SCROLL FOR NEXT