ದೇಶ

ಟೈಮ್ ನಿಯತಕಾಲಿಕೆಯ '100 ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಮೋದಿ, ಮಮತಾ, ಪೂನಾವಾಲ!

Vishwanath S

ನ್ಯೂಯಾರ್ಕ್: ಟೈಮ್ ನಿಯತಕಾಲಿಕೆಯ '100 ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲ ಸ್ಥಾನ ಪಡೆದಿದ್ದಾರೆ.

ಟೈಮ್ ತನ್ನ ವಾರ್ಷಿಕ '2021ರ 100 ಪ್ರಭಾವಶಾಲಿಗಳ' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಾಗತಿಕ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಡ್ಯೂಕ್ ಮತ್ತು ಡಚೆಸ್ ಆಫ್ ಸಸೆಕ್ಸ್ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಸೇರಿದ್ದಾರೆ.

ಸ್ವಾತಂತ್ರ್ಯ ನಂತರ ಪ್ರಧಾನಿ ಮೋದಿಯವರು ಭಾರತವು ಮೂರು ಪ್ರಮುಖ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಇದಕ್ಕೂ ಮುನ್ನ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಸೇರಿದ್ದಾರೆ. ನರೇಂದ್ರ ಮೋದಿ ಅವರು ಮೂರನೆಯವರಾಗಿದ್ದು ದೇಶದ ರಾಜಕೀಯದಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ.

ಹೆಸರಾಂತ ಸಿಎನ್ ಎನ್ ಪತ್ರಕರ್ತ ಫರೀದ್ ಜಕಾರಿಯಾ ಬರೆದಿರುವ ಪ್ರೊಫೈಲ್ ಮೋಡ್ "ದೇಶವನ್ನು ಜಾತ್ಯತೀತತೆಯಿಂದ ಹಿಂದು ರಾಷ್ಟ್ರೀಯತೆಯ ಕಡೆಗೆ ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ.

ಬ್ಯಾನರ್ಜಿಯ ಕುರಿತು, 100 ಅತ್ಯಂತ ಪ್ರಭಾವಶಾಲಿ ಪಟ್ಟಿಗೆ ಆಕೆಯ ಪ್ರೊಫೈಲ್ 66 ವರ್ಷದ ನಾಯಕಿ "ಭಾರತೀಯ ರಾಜಕೀಯದಲ್ಲಿ ಉಗ್ರತೆಯ ಮುಖವಾಗಿ ಮಾರ್ಪಟ್ಟಿದೆ" ಎಂದು ಹೇಳುತ್ತದೆ.

ಕೋವಿಶೀಲ್ಡ್ ಲಸಿಕೆ ತಯಾರಿಕೆಯಿಂದಾಗಿ ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಅದರ್ ಪೂನವಾಲಾ ಸಹ ಸೇರಿದ್ದಾರೆ.

SCROLL FOR NEXT