ಸಂಗ್ರಹ ಚಿತ್ರ 
ದೇಶ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮಹಿಳೆಗೆ 20 ವರ್ಷಗಳ ಜೈಲು ಶಿಕ್ಷೆ!

ತನ್ನ ಆರೈಕೆಯಲ್ಲಿದ್ದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕಾಗಿ ಮಹಿಳೆಯೊರ್ವಳಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಹೈದರಾಬಾದ್: ತನ್ನ ಆರೈಕೆಯಲ್ಲಿದ್ದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕಾಗಿ ಮಹಿಳೆಯೊರ್ವಳಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಹೈದರಾಬಾದ್ ನ ಚಂದ್ರಯ್ಯನಗುಟ್ಟದಲ್ಲಿ ಕೆ ಜ್ಯೋತಿ ಅಲಿಯಾಸ್ ಮಂಜುಳಾಗೆ ಅತ್ಯಾಚಾರ ಮತ್ತು ಪೋಕ್ಸೊ ವಿಚಾರಣೆಯ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಗುರುವಾರ ಶಿಕ್ಷೆಯನ್ನು ಘೋಷಿಸಿದ್ದು ಅಲ್ಲದೆ ಆಕೆಗೆ 10,000 ರೂಪಾಯಿ ದಂಡ ವಿಧಿಸಲಾಗಿದೆ. 

ಒಂಬತ್ತು ವರ್ಷದ ಹುಡುಗನ ಮೇಲೆ ಮಂಜುಳಾ ಲೈಂಗಿಕ ದೌರ್ಜನ್ಯ ನಡೆಸಿದ್ದಳು. ಅಪ್ರಾಪ್ತ ಬಾಲಕ ಈ ವಿಷಯವನ್ನು ತನ್ನ ಹೆತ್ತವರಿಗೆ ಹೇಳುವುದಾಗಿ ಹೇಳಿದ್ದರಿಂದ ಆಕ್ರೋಶಗೊಂಡ ಮಹಿಳೆ ಸಿಗರೇಟ್ ಮತ್ತು ಲೈಟರ್ ನಿಂದ ಸುಟ್ಟಿದ್ದಾಳೆ. 

ನ್ಯಾಯಾಲಯವು ಸಂತ್ರಸ್ತ ಬಾಲಕನ ಸಾಕ್ಷ್ಯ, ವೈದ್ಯಕೀಯ ದಾಖಲೆಗಳು ಮತ್ತು ಅಪರಾಧದ ಸ್ಥಳದಿಂದ ವಶಪಡಿಸಿಕೊಂಡ ಸಾಮಗ್ರಿಗಳನ್ನು ಪರಿಗಣನೆಗೆ ತೆಗೆದುಕೊಂಡು. ಆಕೆ ತಪ್ಪಿತಸ್ಥಳೆದು ಕೋರ್ಟ್ ತೀರ್ಮಾನಕ್ಕೆ ಬಂದಿದ್ದು ಪೊಕ್ಸೊ ಕಾಯ್ದೆ ಮತ್ತು ಸೆಕ್ಷನ್ 324 ಮತ್ತು 506ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ. 

2017ರಲ್ಲಿ ಮಂಜುಳಾ ಚಂದ್ರಯ್ಯನಗುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ಕಾಸ್‌ನ ಖಾಸಗಿ ಶಾಲೆಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಸಂತ್ರಸ್ತ ಬಾಲಕ ಕೂಡ ಓದುತ್ತಿದ್ದನು. ಪ್ರಕೃತಿ ಕರೆಗಾಗಿ ಹುಡುಗ ಹೊರ ಹೋದಾಗ ಮಂಜುಳ ಆತನ ಮರ್ಮಾಂಗವನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದಳು. ಅಲ್ಲದೆ ಆತನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಳು.

ಇದಕ್ಕೆ ಬಾಲಕ ಪ್ರತಿರೋಧಿಸಿದ್ದು ಅಲ್ಲದೆ ತನ್ನ ಹೆತ್ತವರಿಗೆ ವಿಷಯ ತಿಳಿಸುವುದಾಗಿ ಹೇಳಿದಾಗ ಆತನಿಗೆ ಚಿತ್ರಹಿಂಸೆ ನೀಡಿದ್ದಾಳೆ. ಅಲ್ಲದೆ ಒಂದು ದಿನ ಮೂತ್ರವಿಸರ್ಜನೆಗೆ ಹೋದಾಗ ಬಾಲಕ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಳು. ಇದಾದ ನಂತರ ಆಕೆಯನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT