ದೇಶ

ಕಾಂಗ್ರೆಸ್ ರಾಜ್ಯ ನಾಯಕರ ಅಂತರ್ ಕಲಹ; ಬಿಜೆಪಿ ವಿರುದ್ಧ ಹೋರಾಟದ ನಿರೀಕ್ಷೆ ಕಷ್ಟಸಾಧ್ಯ- ಒಮರ್ ಅಬ್ದುಲ್ಲಾ

Nagaraja AB

ಶ್ರೀನಗರ: ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಅಂತರ್ ಕಲಹದಲ್ಲಿ ತೊಡಗಿರುವಾಗ ಬಿಜೆಪಿ ವಿರುದ್ಧ ಹೋರಾಡುತ್ತದೆ ಎಂದು ನಿರೀಕ್ಷಿಸುವುದು ಕಷ್ಟಸಾಧ್ಯ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸರಣಿ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, 
ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಒಳಜಗಳದಲ್ಲಿ ತೊಡಗಿರುವಾಗ ಬಿಜೆಪಿ ವಿರುದ್ಧ ಹೋರಾಡುತ್ತದೆ ಎಂಬ ನಿರೀಕ್ಷೆ ಕಷ್ಟಸಾಧ್ಯ ಎಂಬುದು ನನ್ನ ಊಹೆಯಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿನ ಭ್ರಾತೃತ್ವ, ಅವರ ಪಕ್ಷ, ಅವರ ವ್ಯವಹಾರಗಳ ಬಗ್ಗೆ ಸಾಮಾನ್ಯವಾಗಿ ನಾನು ಕೈಹಾಕುವುದಿಲ್ಲ ಎಂದಿದ್ದಾರೆ.  ಆದಾಗ್ಯೂ, 200 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ- ಕಾಂಗ್ರೆಸ್ ನೇರ ಹೋರಾಟವನ್ನು ನೋಡಿರುವುದಾಗಿ  ಎನ್ ಡಿಎ ಹೊರತುಪಡಿಸಿದ ಪ್ರತಿಯೊಂದು ರಾಜಕೀಯ ಪಕ್ಷಗಳು ಕೆಳಗಿಳಿಯುತ್ತಿರುವಾಗ ಕಾಂಗ್ರೆಸ್ ಏನು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಚುನಾವಣೆಗೆ ನಾಲ್ಕು ತಿಂಗಳು ಬಾಕಿ ಇರುವಾಗಲೇ ರಾಜಸ್ಥಾನ ಕಾಂಗ್ರೆಸ್ ನಲ್ಲಿನ ಆಂತರಿಕ ಕಲಹದಿಂದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

SCROLL FOR NEXT