ದೇಶ

ಅಧಿಕಾರಿಗಳು ಇರುವುದೇ 'ನಮ್ಮ ಚಪ್ಪಲಿ ಎತ್ತಿಕೊಳ್ಳಲು': ಉಮಾ ಭಾರತಿ ವಿವಾದಾತ್ಮಕ ಹೇಳಿಕೆ

Lingaraj Badiger

ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಅವರ ಹೇಳಿಕೆ ಸೋಮವಾರ ತೀವ್ರ ವಿವಾದಕ್ಕೆ ಕಾರಣವಾಗಿದ್ದು, "ಅಧಿಕಾರಶಾಹಿ ಏನೂ ಅಲ್ಲ, ಅವರು ಇರುವದೇ ನಮ್ಮ ಚಪ್ಪಲಿಗಳನ್ನು ಎತ್ತಿಕೊಳ್ಳಲು. ಅವರಿಗೆ ಯಾವುದೇ ನಿಲುವು ಇರುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಉಮಾ ಭಾರತಿ ಅವರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, "ಅಧಿಕಾರಿಗಳು ಏನೂ ಅಲ್ಲ... ಅವರು ಇರುವದೇ ನಮ್ಮ ಚಪ್ಪಲ್‌ಗಳನ್ನು (ಚಪ್ಪಲಿ) ತೆಗೆದುಕೊಳ್ಳಲು. ಅಧಿಕಾರಶಾಹಿ ನಮ್ಮ ಚಪ್ಪಲಿಗಳನ್ನು ಎತ್ತಿಕೊಳ್ಳುತ್ತದೆ. ನಾನು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ, ಮಧ್ಯ ಪ್ರದೇಶ ಸಿಎಂ ಆಗಿ ಮತ್ತು ನಂತರ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಶಾಹಿ ಎಂದರೆ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.

ನಾವು(ರಾಜಕಾರಣಿಗಳು) ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಅದರ ನಂತರವೇ ಫೈಲ್ ಪ್ರಕ್ರಿಯೆಗೆ ಮುಂದಾಗುತ್ತದೆಯ ಎಂದು ಉಮಾ ಭಾರತಿ ಅವರು ಶನಿವಾರ ಭೋಪಾಲ್ ನ ತಮ್ಮ ನಿವಾಸದಲ್ಲಿ ಒಬಿಸಿ ನಿಯೋಗದೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆಯ ವಿಡಿಯೋ ಸೋಮವಾರ ವೈರಲ್ ಆಗಿದ್ದು, ತಮ್ಮ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದಂತೆ ಬಿಜೆಪಿ ನಾಯಕಿ ವಿಷಾದ ವ್ಯಕ್ತಪಡಿಸಿದ್ದಾರೆ.

"ನನ್ನ ಉದ್ದೇಶಗಳು ಒಳ್ಳೆಯದಾಗಿದ್ದರೂ ಅಸಮಂಜಸವಾದ ಭಾಷೆ ಬಳಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ನನ್ನ ಅನುಭವದಿಂದ, ಪ್ರಾಮಾಣಿಕ ಅಧಿಕಾರಶಾಹಿ ಯಾವಾಗಲೂ ಬಲವಾದ ಮತ್ತು ಪ್ರಾಮಾಣಿಕ ರಾಜಕಾರಣಿಗಳಿಗೆ ಉತ್ತಮ ಕಂಪನಿ ನೀಡುತ್ತದೆ ಎಂದು ಹೇಳಬಲ್ಲೆ ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.

ಉಮಾ ಭಾರತಿ ಹೇಳಿಕೆ ನಾಚಿಕೆಗೇಡು ಎಂದು ಟೀಕಿಸಿರುವ ಕಾಂಗ್ರೆಸ್, ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದೆ.

SCROLL FOR NEXT