ಸಾಂದರ್ಭಿಕ ಚಿತ್ರ 
ದೇಶ

ತ್ರಿಪುರ ಗಡಿಯಲ್ಲಿ ಸಂಬಂಧಿಗಳ ಘರ್ಷಣೆ: ಇಬ್ಬರು ಬಿಎಸ್ ಎಫ್ ಯೋಧರು ಸಾವು; ಪೋಸ್ಟ್ ಕಮಾಂಡರ್ ಗೆ ಗಾಯ

ತ್ರಿಪುರ ಬಳಿ ಬಾಂಗ್ಲಾ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಸಂಬಂಧಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದರು, ಹಿರಿಯ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗರ್ತಲಾ: ತ್ರಿಪುರ ಬಳಿ ಬಾಂಗ್ಲಾ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಸಂಬಂಧಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದರು, ಹಿರಿಯ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಮತಿ ಜಿಲ್ಲೆಯ ಕಾರ್ಬುಕ್ ಉಪವಿಭಾಗದಲ್ಲಿರುವ ಖಗ್ರಾಚೇರಿ ಪೋಸ್ಟ್ ಗಡಿಯ ಬೇಲಿ ಗೇಟ್ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದೆ.

20 ನೇ ಬೆಟಾಲಿಯನ್‌ಗೆ ಸೇರಿದ ಹೆಡ್ ಕಾನ್ಸ್‌ಟೇಬಲ್ ಸತ್ಬೀರ್ ಸಿಂಗ್ ಮತ್ತು ಕಾನ್ಸ್‌ಟೇಬಲ್ ಪ್ರತಾಪ ಸಿಂಹ ನಡುವೆ ನಡೆದ ಜಗಳದ ವೇಳೆ ಸಂಭವಿಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಗರ್ತಲಾದ ಪ್ರಧಾನ ಕಚೇರಿಯ ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಸತಾಬೀರ್ ಸಿಂಗ್ ಮೇಲೆ ಪ್ರತಾಪ್ ಸಿಂಹ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೋಸ್ಟ್ ನಲ್ಲಿ ನಿಯೋಜಿಸಲಾಗಿದ್ದ ಸೆಂಟ್ರಿ  ಪ್ರತಾಪ್ ಸಿಂಹನನ್ನು ಕೊಂದಿದ್ದಾನೆ ಎಂದು ಅವರು ಹೇಳಿದರು.

ಕಾನ್ಸ್‌ಟೇಬಲ್ ಪ್ರತಾಪ ಸಿಂಹ, ಪೋಸ್ಟ್ ಕಮಾಂಡರ್ ಸಬ್ ಇನ್ಸ್‌ಪೆಕ್ಟರ್ ರಾಮ್ ಕುಮಾರ್ ಅವರ ಮೇಲೆ  ಗುಂಡು ಹಾರಿಸಿದ್ದರಿಂದ ಅವರ ಎರಡು ಕಾಲುಗಳು ಗಾಯಗೊಂಡಿವೆ ಎಂದು ಹೇಳಲಾಗಿದೆ. ಘಟನೆಗೆ ನಿಜವಾದ ಕಾರಣವನ್ನು ಕಂಡುಹಿಡಿಯಲು ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಸಿಲಾಚೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT