ದೇಶ

ಪಿತ್ರಾರ್ಜಿತ ಆಸ್ತಿ ಪಡೆಯಲು 20 ವರ್ಷಗಳಲ್ಲಿ ಕುಟುಂಬದ 5 ಮಂದಿ ಹತ್ಯೆ ಮಾಡಿದ್ದವನ ಬಂಧನ

Srinivas Rao BV

ಗಾಜಿಯಾಬಾದ್: ಆಸ್ತಿ ಕಲಹಗಳು ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುವಂತೆ ಮಾಡುತ್ತವೆ ಎನ್ನುವುದಕ್ಕೆ ಇಲ್ಲೊಂದು ಪ್ರಕರಣ ತಾಜಾ ಉದಹಾರಣೆಯಾಗಬಲ್ಲದು.

ವ್ಯಕ್ತಿಯೋರ್ವ 5 ಕೋಟಿ ರೂಪಾಯಿ ಮೊತ್ತದ ಪಿತ್ರಾರ್ಜಿತ ಆಸ್ತಿಯ ಮೇಲೆ ಮನೆಯ ಉಳಿದ ಸದಸ್ಯರು ಹಕ್ಕು ಸ್ವಾಮ್ಯ ಪ್ರತಿಪಾದಿಸುವುದನ್ನು ತಡೆಯುವುದಕ್ಕೆ 20 ವರ್ಷಗಳಲ್ಲಿ ತನ್ನ ಕುಟುಂಬದ ಐವರು ಸದಸ್ಯರನ್ನು ಹತ್ಯೆ ಮಾಡಿದ್ದಾನೆ.

ಇತ್ತೀಚೆಗೆ ತನ್ನ ಅಣ್ಣನ ಮಗನ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರಿಂದ ಆತ ತಾನು ಮಾಡಿದ್ದ ಹಳೆಯ ಕೊಲೆಗಳ ಬಗ್ಗೆ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.

ಗಾಜಿಯಾಬಾದ್ ನ ಪೊಲೀಸರು ಬಂಧಿಸಿರುವ ಲೀಲು ಎಂಬ ವ್ಯಕ್ತಿ ತನ್ನ ಅಣ್ಣನ ಮಗ ರೇಷುವನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಯಾಗಿದ್ದಾನೆ.

ಈತನ ವಿಚಾರಣೆ ವೇಳೆ, ತನ್ನ ಅಣ್ಣ ಬ್ರಿಜೇಶ್ ತ್ಯಾಗಿ ಅವರ ಪುತ್ರ ರೇಷುವನ್ನು ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಹಕ್ಕು ಪ್ರತಿಪಾದನೆ ಮಾಡುವುದನ್ನು ಪ್ರತಿಪಾದಿಸಲು ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿಯನ್ನು ಆತ ನೀಡಿದ್ದಾನೆ

ಆ.15 ರಂದು ಬಾಲಕ/ಯುವಕ ರೇಷು ನಾಪತ್ತೆಯಾಗಿ ಒಂದು ವಾರವಾಗಿದ್ದರೂ ಪತ್ತೆಯಾಗಿಲ್ಲ ಎಂದು ಆತನ ಪೋಷಕರು ದೂರು ನೀಡಿದ್ದರು. ದೂರು ನೀಡಿದ ಒಂದು ವಾರದ ಬಳಿಕ ಬ್ರಿಜೇಶ್ ಆ.22 ರಂದು 14 ದಿನಗಳ ಹಿಂದೆ ತಮ್ಮ ನಿಕಟವರ್ತಿ ಸಂಬಂಧಿಯೊಬ್ಬರು ಹಳೆಯ ಆಸ್ತಿ ವಿವಾದದ ವಿಷಯವಾಗಿ ತಮ್ಮ ಮಗನನ್ನು ಅಪಹರಣ ಮಾಡಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ್ದರು.

ಸಾಂದರ್ಭಿಕ ಹಾಗೂ ಎಲೆಕ್ಟ್ರಾನಿಕ್ ಕಣ್ಗಾವಲಿ ಸಾಕ್ಷ್ಯಗಳನ್ನು ಪರಿಶೀಲಿಸಿದ ಪೊಲೀಸರು ತ್ಯಾಗಿ ಅವರ ಕಿರಿಯ ಸಹೋದರ ಲೀಲು ಎಂಬಾತನನ್ನು ಬಂಧಿಸಿದ್ದಾರೆ. ಈತ ಬಸಂತ್ ಪುರದ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚಾರಾಣೆ ವೇಳೆ ತಾನು ರೇಣು ಎಂಬ ಬಾಲಕನನ್ನು ಹತ್ಯೆ ಮಾಡಿ ಬುಲಂದ್ ಶಹರ್ ನ ನಾಲೆಗೆ ಆತನ ಶವವನ್ನು ಎಸೆದಿರುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೇ ಮತ್ತೊಂದು ಸ್ಫೋಟಕ, ಅಘಾತಕಾರಿ ಮಾಹಿತಿಯನ್ನೂ ಈತ ಬಹಿರಂಗಪಡಿಸಿದ್ದು, 5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ತನ್ನ ಪಾಲಿಗೆ ಯಾರೂ ಪ್ರತಿಸ್ಪರ್ಧಿಗಳಿರಬಾರದು ಎಂಬ ದುರುದ್ದೇಶದಿಂದ ನನ್ನ ಹಿರಿಯ ಸಹೋದರ ಸುಧೀರ್ ತ್ಯಾಗಿ ಅವರನ್ನು 2001 ರಲ್ಲಿ ಹತ್ಯೆ ಮಾಡಿದ್ದು, ಇದಾದ ಬಳಿಕ ಕೇವಲ ಕೆಲವೇ ತಿಂಗಳಲ್ಲಿ ಸುಧೀರ್ ಅವರ 8 ವರ್ಷದ ಮಗಳು ಪಾಯಲ್ ನ್ನು ವಿಷ ಉಣಿಸಿ ಕೊಂದೆ, ಇದಾದ ಮೂರು ವರ್ಷಗಳ ಬಳಿಕ, ಅಣ್ಣನ ಹಿರಿಯ ಮಗಳು ಪಾರಲ್ ನ್ನು ಹತ್ಯೆ ಮಾಡಿ ಹಿಂದೋನ್ ನದಿಗೆ ಎಸೆದಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ 8 ವರ್ಷಗಳ ಹಿಂದೆ ನಾನು ಈ ಸಹೋದರನ ಹಿರಿಯ ಪುತ್ರ ನೀಶುವನ್ನು ಹತ್ಯೆ ಮಾಡಿ, ಆತನ ಶವವನ್ನು ಹಿಂದೋನ್ ನದಿಗೆ ಎಸೆದಿದ್ದೆ ಎಂಬ ಮಾಹಿತಿ ನೀಡಿದ್ದಾರೆ.

ಪಿತ್ರಾರ್ಜಿತ ಆಸ್ತಿಗಳಿಗೆ ಪ್ರತಿಸ್ಪರ್ಧಿಗಳಿರಬಾರದು ಎಂಬ ಕಾರಣದಿಂದಾಗಿ ಆತ 20 ವರ್ಷಗಳಲ್ಲಿ 150 ಮಂದಿಯನ್ನುಹತ್ಯೆ ಮಾಡಿದ್ದಾನೆ. ಪೊಲೀಸರು ರೇಷ್ಣು ಅವರ ಮೃತ ದೇಹ ಶೋಧ ಕಾರ್ಯಾಚರಣೆಡಸುತ್ತಿದ್ದಾರೆ.

SCROLL FOR NEXT