ದೇಶ

ನಾರ್ಕೋಟಿಕ್ ಜಿಹಾದ್: ಕಾಂಗ್ರೆಸ್ ನ್ನು ಇಕ್ಕಟ್ಟಿಗೆ ಸಿಲುಕಿಸಿ ಪಿ.ಚಿದಂಬರಂ ಹೇಳಿಕೆ

Srinivas Rao BV

ಕೊಚ್ಚಿನ್: ನಾರ್ಕೊಟಿಕ್ ಜಿಹಾದ್ ಬಗ್ಗೆ ಕೇರಳದಲ್ಲಿನ ಕ್ಯಾಥೋಲಿಕ್ ಬಿಷಪ್ ಜೋಸೆಫ್ ಕಲ್ಲರಂಗತ್ ಅವರ ಹೇಳಿಕೆಗೆ ಮಾಜಿ ಕೇಂದ್ರ ಸಚಿವಕ್ ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಮೂಲಕ ಯುವಕರನ್ನು ಹಾಳು ಮಾಡಲಾಗುತ್ತಿದೆ. ಶಸ್ತ್ರಾಸ್ತ್ರಗಳನ್ನು ನುಗ್ಗಿಸಲು ಆಗದ ಪ್ರದೇಶಗಳಲ್ಲಿ ತೀವ್ರಗಾಮಿಗಳು ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಗಳ ಮೂಲಕ ಯುವಜನತೆಯನ್ನು ಹಾಳುಗೆಡವುತ್ತಿದ್ದಾರೆ ಎಂದು ಪಾಲ ಬಿಷಪ್ ಜೋಸೆಫ್ ಕಲ್ಲರಂಗತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. 

ಕಲ್ಲರಂಗತ್ ಅವರ ಈ ಹೇಳೆಕೆ ಆರಂಭದಲ್ಲಿ ಕೇರಳದ ಕಾಂಗ್ರೆಸ್ ನಾಯಕರು, ವಿಪಕ್ಷ ನಾಯಕ ವಿ.ಡಿ ಸತೀಶನ್ ಅವರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಈಗ ಮಾಜಿ ಕೇಂದ್ರ ಸಚಿವ ಚಿದಂಬರಂ ಅವರೂ ಬಿಷಪ್ ಅವರ ಆರೋಪವನ್ನು "ವಿಕೃತ ಚಿಂತನೆ"ಯೆಂದು ಟೀಕಿಸಿದ ನಂತರ ಕೆಪಿಸಿಸಿ ಮಾಜಿ ಕೇಂದ್ರ ಸಚಿವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ಕೇರಳದಲ್ಲಿ ಕ್ಯಾಥೀಲಿಕ್ ಸಮುದಾಯದಿಂದ ಕಾಂಗ್ರೆಸ್ ಗೆ ಬಹುಪಾಲು ಬೆಂಬಲ ದೊರೆಯುತ್ತಿತ್ತು. ಈಗ ಈ ಬೆಳವಣಿಗೆ ಮೂಲಕ ಕೆಪಿಸಿಸಿ ಚರ್ಚ್ ನೊಂದಿಗೆ ಮತ್ತೆ ಸಂಬಂಧ ಸುಧಾರಿಸಲು ಹೆಣಗುತ್ತಿದೆ.

ಬಿಷಪ್ ಅವರ ಹೇಳಿಕೆಗೆ ಲೇಖನದ ಮೂಲಕ ಪ್ರತಿಕ್ರಿಯೆ ನೀಡಿರುವ ಚಿದಂಬರಂ, ಪಾಲಾ ಬಿಷಪ್ ಅವರ ಹೇಳಿಕೆ, ಅವರ ವಿಕೃತ ಚಿಂತನೆಯನ್ನು ಹಾಗೂ ಧರ್ಮಗಳ ನಡುವೆ ಅಪನಂಬಿಕೆ ಉತ್ತೇಜಿಸುವ, ಕೋಮು ಸಮರವನ್ನುಂಟುಮಾಡುವ ಉದ್ದೇಶದ್ದಾಗಿದೆ" ಎಂದು ಹೇಳಿದ್ದರು.

ಲವ್ ಜಿಹಾದ್ ಎಂಬುದು ಹಿಂದೂ ತೀವ್ರಗಾಮಿ ಬಲಪಂಥೀಯರು ಯುವಕ/ಯುವತಿಯರನ್ನು ತೀವ್ರಗಾಮಿಗಳನ್ನಾಗಿಸುವುದಕ್ಕೆ ಸೃಷ್ಟಿಸಿರುವ ಒಂದು ಭೂತ ಎಂದು ಚದಂಬರಂ ಆರೋಪಿಸಿದ್ದಾರೆ. 

ಜಾತ್ಯತೀತ ರಾಷ್ಟ್ರ ಇಂತಹ ಮತಾಂಧತೆಯನ್ನು ಮೆಟ್ಟಿ ನಿಲ್ಲಬೇಕು ಎಂದು ಚಿದಂಬರಂ ಹೇಳಿದ್ದಾರೆ.

ಅಷ್ಟೇ ಅಲ್ಲದೇ ದೀಕ್ಷೆ ಪಡೆದಿರುವ ಬಿಷಪ್ ಜೋಸೆಫ್ ಅವರು ಈ ರೀತಿ ಮಾತನಾಡಿರುವುದು ನನಗೆ ಹಾಗೂ ನನ್ನಂತಹ ಅನೇಕ ಲಕ್ಷಾಂತರ ಮಂದಿಗೆ ನೋವುಂಟುಮಾಡಿದೆ. ಭಾರತದಲ್ಲಿ ಇಸ್ಲಾಮ್ ವಿಸ್ತರಣಾವಾದಿತ್ವವಾಗಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ.  ಇಸ್ಲಾಮ್ ಗೆ ಸಾಮೂಹಿಕ ಮತಾಂತರಗೊಳ್ಳುತ್ತಿರುವುದೂ ಸುಳ್ಳು ಎಂದು ಚಿದಂಬರಮ್ ತಮ್ಮ ವಾದ ಸಮರ್ಥಿಸಿಕೊಂಡಿದ್ದಾರೆ.

SCROLL FOR NEXT