ದೇಶ

ಕೊರೋನಾದಿಂದ ಮಿಜೋರಾಂ ಸಿಎಂ ಸಹೋದರಿ ಸಾವು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.32

Lingaraj Badiger

ಐಜವಾಲ್: ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಿಜೋರಾಂ ಮುಖ್ಯಮಂತ್ರಿ ಜೊರಮಥಂಗ ಅವರ ಹಿರಿಯ ಸಹೋದರಿ ಲಾಲ್‌ವಾನಿ ಅವರು ಸೋಮವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

88 ಲಾಲ್‌ವಾನಿ ಅವರು ಐಜವಾಲ್ ಬಳಿಯ ಜೋರಾಮ್ ವೈದ್ಯಕೀಯ ಕಾಲೇಜಿನಲ್ಲಿ(ZMC) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 11: 30ಕ್ಕೆ ನನ್ನ ಪ್ರೀತಿಯ ಹಿರಿಯ ಸಹೋದರಿ ಲಾಲ್‌ವಾನಿ(88 ವರ್ಷ) ಅವರ ನಿಧನರಾದರು ಎಂದು ನಾನು ತೀವ್ರ ದುಃಖದಿಂದ ತಿಳಿಸುತ್ತೇನೆ" ಎಂದು ಮುಖ್ಯಮಂತ್ರಿ ಜೊರಮಥಂಗ ಅವರು ಟ್ವೀಟ್ ಮಾಡಿದ್ದಾರೆ.

ಲಾಲ್‌ವಾನಿ ಅವರು ಏಳು ಒಡಹುಟ್ಟಿದವರಲ್ಲಿ ಮೂರನೆಯವರಾಗಿದ್ದು, ಆಸ್ತಮಾ ಮತ್ತು ವಯೋಸಹಜ ಕಾಯಿಲೆಗಳಿಂದ ತಿಂಗಳುಗಟ್ಟಲೆ ಹಾಸಿಗೆ ಹಿಡಿದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಲಾಲ್‌ವಾನಿ ಅವರಿಗೆ ಸೆಪ್ಟೆಂಬರ್ 22 ರಂದು ಕೋವಿಡ್ -19 ಪಾಸಿಟಿವ್ ದೃಢಪಟ್ಟಿತ್ತು ಎಂದು ಸಿಎಂ ಹೇಳಿದ್ದಾರೆ.

ಈ ಮಧ್ಯೆ ಸೋಮವಾರ ಮಿಜೋರಾಂನಲ್ಲಿ 527 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ವರದಿಯಾಗಿದ್ದು, ಇದೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 88,693 ಕ್ಕೆ ತಲುಪಿದೆ ಎಂದು ಸರ್ಕಾರದ ಬುಲೆಟಿನ್ ತಿಳಿಸಿದೆ.

ಇಂದು ಸೋಂಕಿಗೆ ಮೂವರು ಬಲಿಯಾಗಿದ್ದು, ಸಾವಿನ ಸಂಖ್ಯೆ 295ಕ್ಕೆ ಏರಿದೆ. ಅಲ್ಲದೆ ಪಾಸಿಟಿವಿಟಿ ದರ ಶೇ. 31.77 ರಷ್ಟಿದ್ದು, 1,659 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

SCROLL FOR NEXT