ದೇಶ

ಗೋವಾ ವಿಧಾನಸಭಾ ಚುನಾವಣೆ: ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲು ಟಿಎಂಸಿ ಚಿಂತನೆ- ಮಾಜಿ ಸಿಎಂ ಫಲೆರೊ

Lingaraj Badiger

ಪಣಜಿ: ಮುಂದಿನ ವರ್ಷದ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳದೆ ಎಲ್ಲಾ 40 ಸ್ಥಾನಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಯೋಜಿಸಿದೆ ಎಂದು ಗೋವಾ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಸೇರಿದ ಒಂದು ದಿನದ ನಂತರ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೋವಾ ಮಾಜಿ ಮುಖ್ಯಮಂತ್ರಿ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ 15 ದಿನಗಳ 'ಪಿತೃ ಪಕ್ಷ'ದ ಅವಧಿಯಲ್ಲಿ ಒಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಇದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅಶುಭವೆಂದು ಪರಿಗಣಿಸಲಾಗಿದೆ ಎಂದರು.

ಫಲೆರೊ ಅವರು ಬುಧವಾರ ಒಂಬತ್ತು ಇತರ ನಾಯಕರೊಂದಿಗೆ ಕೋಲ್ಕತ್ತಾದಲ್ಲಿ ಟಿಎಂಸಿಗೆ ಸೇರಿದ್ದರು.

ಡೆರೆಕ್ ಒ'ಬ್ರೇನ್, ಸುಖೇಂದು ಶೇಖರ್ ರಾಯ್, ಪ್ರಸೂನ್ ಬ್ಯಾನರ್ಜಿ ಮತ್ತು ಮನೋಜ್ ತಿವಾರಿ ಸೇರಿದಂತೆ ಹಿರಿಯ ಟಿಎಂಸಿ ನಾಯಕರ ಉಪಸ್ಥಿತಿಯಲ್ಲಿ ಅವರು ಫಲೆರೊ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

"ಗೋವಾದಲ್ಲಿ ಮುಂಬರುವ ಚುನಾವಣೆಗೆ ಪಕ್ಷ ಹೊಸ ಮುಖಗಳನ್ನು ಹುಡುಕುತ್ತಿದೆ. ಟಿಎಂಸಿಯಿಂದ ನಾವು 40 ಕ್ಲೀನ್ ಹೊಸ ಮುಖಗಳನ್ನು ನೀಡಲು ಬಯಸುತ್ತೇವೆ" ಎಂದು ಮಾಜಿ ಸಿಎಂ ಹೇಳಿದ್ದಾರೆ.

ಇದೇ ವೇಳೆ ಟಿಎಂಸಿ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಯೋಜಿಸುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಫಲೆರೊ ಅವರು, "ನಾವು ಏಕಾಂಗಿಯಾಗಿ ಹೋರಾಡುತ್ತೇವೆ" ಎಂದು ಹೇಳಿದರು.

SCROLL FOR NEXT